ಬಜಪೆ: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ಹಗಲು ರಥೋತ್ಸವ ನಡೆಯಿತು. ರಥಾರೋಹಣ, ರಥದಲ್ಲಿ ಹೂವಿನ ಪೂಜೆ, ರಥೋತ್ಸವ ನಡೆದು, ರಥಬೀದಿ ಹಾಗೂ ಭ್ರಾಮರೀವನದ ಕಟ್ಟೆಗಳಲ್ಲಿ ಪೂಜೆ, ಬಂಗಾರದ ವಸಂತಮಂಟಪದಲ್ಲಿ ಪೂಜೆ ನಡೆಯಿತು. ರಾತ್ರಿ ದರ್ಶನ ಬಲಿ, ಚಿನ್ನದ ರಥ, ಚಿನ್ನದ ಪಲ್ಲಕಿ ಉತ್ಸವ ನಡೆದು ಶಯನ ಅಲಂಕಾರದ ಬಳಿಕ ಶಯನ ಕವಾಟ ಬಂಧನ ನಡೆಯಿತು. ಹಗಲು ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
Kshetra Samachara
21/04/2022 07:46 am