ಮುಲ್ಕಿ: ಮುಲ್ಕಿ ಸಮೀಪದ ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ವಾರ್ಷಿಕ ಸಿರಿ ಸಿಂಗಾರ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಎ.19 ಮಂಗಳವಾರ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಶುದ್ಧ ಹೋಮ, ಚಪ್ಪರ ಮುಹೂರ್ತ, ಭಂಡಾರ ಇಳಿಯುವ ಕಾರ್ಯಕ್ರಮ ನಡೆದ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮೈಸಂದಾಯ ದೈವದ ನೇಮ, ಶ್ರೀ ಕಾಂತಾಬಾರೆ ಬೂದಬಾರೆ ಯರ ಬೀರ, ಶ್ರೀ ಧೂಮಾವತಿ ಜಾರಂದಾಯ ಬಂಟ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಎ.20 ಪಂಜುರ್ಲಿ ದೈವದ ನೇಮ ನಡೆದು ಭಂಡಾರ ನಿರ್ಗಮನ ಕಾರ್ಯಕ್ರಮ ನಡೆಯಿತು.
ಎ.21 ಬೆಳಿಗ್ಗೆ ಶುದ್ಧ ಹೋಮ ನಡೆಯಲಿದೆ. ಈ ಸಂದರ್ಭ ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಂಗನಾಥ ಶೆಟ್ಟಿ, ಕಾರ್ಯಧ್ಯಕ್ಷ ಮಾಧವ ಪೂಜಾರಿ, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಯುವಕ ಮಂಡಲದ ಅಧ್ಯಕ್ಷ ಮೋಹನ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ, ಜೊತೆ ಕೋಶಾಧಿಕಾರಿ ವಿನಯ ವಿಶ್ವನಾಥ, ಮುಂಬೈ ಸಮಿತಿ ಅಧ್ಯಕ್ಷೆ ಪ್ರಭಾ ಕೆ. ಬಂಗೇರ, ಅರ್ಚಕ ಕೃಷ್ಣಪ್ಪ ಪೂಜಾರಿ, ಯಾದವ ಪೂಜಾರಿ, ಹರೀಶ್ ಅಮೀನ್, ಸಮಿತಿಯ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
20/04/2022 12:46 pm