ಬಜಪೆ: ಕರಾವಳಿಯಲ್ಲಿ ವಿಶೇಷವಾಗಿ ಧಾರ್ಮಿಕ ಪುನರುತ್ಧಾನವನ್ನು ಕಾಣುತ್ತಿದ್ದೇವೆ.ಜೊತೆಗೆ ಈಗ ಇಲ್ಲಿಯ ಅತೀ ಹೆಚ್ಚು ದೇವಾಲಯಗಳು ಜೀರ್ಣೋದ್ದಾರಗೊಳ್ಳುತ್ತಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹೇಳಿದರು.
ಕಟೀಲು ದೇವಳದ ಸರಸ್ವತಿ ಸದನದಲ್ಲಿ ಶ್ರೀ ರಾಮ ನವಮಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಸಂದರ್ಭ ಕಟೀಲು ದೇವಳದ ಅನುವಂಶಿಕ ಅರ್ಚಕರುಗಳಾದ ವಾಸುದೇವ ಆಸ್ರಣ್ಣ,ಲಕ್ಷ್ಮೀನಾರಯಣ ಆಸ್ರಣ್ಣ,ಅನಂತಪದ್ಮನಾಭ ಆಸ್ರಣ್ಣ ,ಸಂಸದ ನಳಿನ್ ಕುಮಾರ್ ಕಟೀಲ್,ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್,ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ,ಬಿಪಿನ್ ಪ್ರಸಾದ್ ಕೊಡೆತ್ತೂರು,ಸಂಗೀತ ನಿರ್ದೇಶಕ ಗುರುಕಿರಣ್,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿಪಂಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಸಂತೋಷ್ ಆಳ್ವ ಅವರು ಕಾರ್ಯಕ್ರಮ ನಿರೂಪಿಸಿದರು.
Kshetra Samachara
04/04/2022 01:43 pm