ಉಡುಪಿ: ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ. ಬ್ರಹ್ಮಕಲಶೋತ್ಸವ. ನಾಗಮಂಡಲೋತ್ಸವ. ಮುಂತಾದ ಧಾರ್ಮಿಕ ಕಾರ್ಯಕ್ರಮದ ಅನ್ನಸಂತರ್ಪಣೆಗೆ. ಮೊಗವೀರ ಗ್ರಾಮ ಸಭಾ ಹೆಬ್ರಿ ವತಿಯಿಂದ ಶುಕ್ರವಾರ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು .
ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಹೊರೆಕಾಣಿಕೆ ಹೊತ್ತ ವಾಹನಕ್ಕೆ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಬ್ರಿಯ ಯುವ ನೇತಾರ. ಉದ್ಯಮಿ. ಕೊಡುಗೈ ದಾನಿ ಎಚ್. ಪ್ರವೀಣ್ ಬಲ್ಲಾಳ್ .ಸಮಾಜ ಸೇವಕ ಎಚ್. ಭಾಸ್ಕರ ಜೋಯಿಸ್ .ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ. ಸದಸ್ಯ ಎಚ್. ಜನಾರ್ಧನ್. ಕುಚ್ಚೂರು ಶಾಂತಿನಿಕೇತನ ಯುವೃಂದದ ಅಧ್ಯಕ್ಷ ರಾಜೇಶ್ ಹಾಗೂ ಸರ್ವಸದಸ್ಯರು. ಮೊಗವೀರ ಗ್ರಾಮ ಸಭಾ ಹೆಬ್ರಿ ಇದರ ಅಧ್ಯಕ್ಷ. ಹೆಬ್ರಿ ಗ್ರಾಪಂ ಸದಸ್ಯ ಎಚ್. ಬಿ ಸುರೇಶ್ . ಆನಂದ ಮರಕಾಲ. ಗುರಿಕಾರ ವಿಠ್ಠಲ ಮರಕಾಲ ಹಾಗೂ ಮೊಗವೀರ ಸಮಾಜದ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/04/2022 05:46 pm