ಸಸಿಹಿತ್ಲು: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ನಡಾವಳಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಮಾ. 26 ಶನಿವಾರ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ನಾಗತಂಬಿಲ, ಕಟೀಲು ಶ್ರೀ ದೇವಿ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ 11.30ರಿಂದ ನಡಾವಳಿ ಮಹೋತ್ಸವದ ಅಂಗವಾಗಿ ಮಹಾಪೂಜೆ, ಬಲಿ ಪ್ರಾರಂಭ, ಮೂರ್ತಿ ದರ್ಶನ, ಕಂಚಿಲು ಸೇವೆ ಉರುಳುಸೇವೆ ಹರಕೆ, ತುಲಾಭಾರ ನಡೆಯಿತು.
ಮಾ. 27 ಭಾನುವಾರ ಬೆಳಿಗ್ಗೆ ಬಲಿಮೂರ್ತಿಯೊಂದಿಗೆ ಭಂಡಾರ ನಿರ್ಗಮನ ಕಾರ್ಯಕ್ರಮ ನಡೆಯಿತು. ಕ್ಷೇತ್ರಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಯುವನಾಯಕ ಮಿಥುನ್ ರೈ ಮತ್ತಿತರರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ರಾಮಪ್ಪ ಮಾಸ್ಟರ್, ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಅಧ್ಯಕ್ಷ ವಾಮನ್ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಮಾ. 27 ಸೋಮವಾರ ಬೆಳಗ್ಗೆ "ಓಂ ನಮೋ ಭಗವತೇ ವಾಸುದೇವಾಯ" ದ್ವಾದಶಾಕ್ಷರ ಮಂತ್ರೋಚ್ಚಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
Kshetra Samachara
27/03/2022 01:24 pm