ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮುಂದುವರೆದ ವ್ಯಾಪಾರ ನಿಷೇಧ: ಆಸೋಡು ಜಾತ್ರೆಯಲ್ಲೂ ಮುಸಲ್ಮಾನರಿಗೆ ನೋ ಸ್ಟಾಲ್ !

ಕುಂದಾಪುರ: ಜಿಲ್ಲೆಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ನಿಷೇಧ ಮುಂದುವರೆದಿದೆ. ತಾಲೂಕಿನ ಅಸೋಡು ಗ್ರಾಮದ ಶ್ರೀ ನಂದಿಕೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಮರಿಗೆ ಮತ್ತು ಹಿಂದುಯೇತರರಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದಾಗಿ ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆಯವರು ಇವತ್ತು ಮನವಿ ಮಾಡಿದ್ದಾರೆ.

ದೇವಸ್ಥಾನದ ಮುಖ್ಯಸ್ಥರಾದ ಅಜಿತ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಹಿಂದೂ ಸಂಘಟನೆ ಪ್ರಮುಖರು ಹಾಜರಿದ್ದರು.

ಹಿಂದೂ ದೈವ ದೇವರಿಗೆ ಅಪಮಾನ ಮಾಡುವವರಿಗೆ ದೇವಸ್ಥಾನದ ಜಾತ್ರೆಗಳಲ್ಲಿ ಅವಕಾಶ ನೀಡುವುದು ಸರಿಯಲ್ಲ. ಅವರಾಗಿಯೇ ಕ್ರಿಯೆ ಆರಂಭಿಸಿದ್ದು ಅದಕ್ಕೆ ನಮ್ಮ ಪ್ರತಿಕ್ರಿಯೆ ಇದು ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಹೇಳಿದ್ದಾರೆ.

Edited By :
Kshetra Samachara

Kshetra Samachara

24/03/2022 03:37 pm

Cinque Terre

11.25 K

Cinque Terre

1

ಸಂಬಂಧಿತ ಸುದ್ದಿ