ಮಂಗಳೂರು: ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ತೊಕ್ಕೊಟ್ಟಿನ ಕುತ್ತಾರು ಶ್ರೀ ಕೊರಗಜ್ಜ ಸನ್ನಿಧಿಗೆ ವಿಎಚ್ ಪಿ ನೇತೃತ್ವದಲ್ಲಿ 2 ನೇ ವರ್ಷ ಪಾದಯಾತ್ರೆ ಕೊರಗಜ್ಜನೆಡೆ ನಮ್ಮನಡೆ ಇದೇ ಮಾಚ್೯ 20 ರಂದು ನಡೆಯಲಿದೆ ಎಂದು ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಕುತ್ತಾರಿನ ಕೊರಗಜ್ಜ ಸಾನಿಧ್ಯದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಚ್೯ 20 ರಂದು ಬೆಳ್ಳಗೆ ಅರು ಗಂಟೆಗೆ ಪಾದಯಾತ್ರೆ ಅರಂಭಗೊಂಡು 9 ಘಂಟೆ ಸುಮಾರಿಗೆ ಈ ಕೊರಗಜ್ಜ ನ ಕ್ಷೇತ್ರಕ್ಕೆ ತಲುಪಲಿದೆ. ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ವಿಎಚ್ ಪಿ ಸಂಘಟನೆ, ಹಿಂದೂ ಸನಾತನ ಸಾಂಸ್ಕೃತಿಯ ರಕ್ಷಣೆಗೆ ಬದ್ದರಾಗಿ ನಮ್ಮ ಧರ್ಮ,ದೇವರು ಹಾಗೂ ಧಾರ್ಮಿಕ ನಂಬಿಕೆಗಳಿಗೆ ತೊಂದರೆಯಾದಗ ಅದನ್ನು ಪ್ರತಿಭಟಿಸಿಸುವ ಮೂಲಕ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಇಂದು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಈ ಪಾದಯಾತ್ರೆ ಮೂಲಕ ಹಿಂದೂ ಸಮಾಜಕ್ಕೆ ಐಕ್ಯತೆ , ಒಗ್ಗಟು ಹಾಗೂ ಲೋಕದ ಕಲ್ಯಾಣ ಆಗಬೇಕಿದೆ ಎಂದರು.
Kshetra Samachara
18/03/2022 10:57 pm