ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮರಾಠ ಸಮಾಜದ ಹೋಳಿ ಕುಣಿತ ನೋಡುವುದೇ ಕಣ್ಣಿಗೊಂದು ಹಬ್ಬ!

ವರದಿ: ರಹೀಂ ಉಜಿರೆ

ಸರಳೆಬೆಟ್ಟು: ಹೋಳಿ ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದ ಹಬ್ಬ. ದಕ್ಷಿಣದಲ್ಲಿ ಇದರ ಆಚರಣೆ ಸ್ವಲ್ಪ ಮಟ್ಟಿಗೆ ಕಡಿಮೆಯೇ. ಆದರೆ ತಲೆತಲಾಂತರದ ಹಿಂದೆ ಉತ್ತರದಿಂದ ವಲಸೆ ಬಂದು ಕರಾವಳಿಯಲ್ಲಿ ನೆಲೆಸಿರುವ ಕುಡುಬಿ ಹಾಗೂ ಮರಾಠಿ ಜನಾಂಗದವರು ಈ ಹಬ್ಬವನ್ನು ಈ ಭಾಗದಲ್ಲೂ ವಿಶಿಷ್ಠವಾಗಿ ಆಚರಿಸುತ್ತಾರೆ. ಹೋಳಿ ಹಣ್ಣಿಮೆಗೆ ಕೆಲ ದಿನ ಮುಂಚಿತವಾಗಿ ಆರಂಭಗೊಂಡು ಹುಣ್ಣಿಮೆಯಂದು ಕೊನೆಗೊಳ್ಳುವ ಇವರ ಆಚರಣೆಗಳು ಅತ್ಯಂತ ವಿಶಿಷ್ಠವಾದದ್ದು.

ತಲೆ ತುಂಬಾ ಮುಂಡಾಸು, ಮುಂಡಾಸಿನ ಸುತ್ತಲೂ ಅಬ್ಬಲಿಗೆ (ಕನಕಾಂಬರ), ಸುರಗಿ ಹೂವಿನ ಸಿಂಗಾರ. ಮುಂಡಾಸಿನ ಮೇಲೆ ಸಿಕ್ಕಿಸಿರುವ ಹಟ್ಟಿಮುದ್ದ ಹಕ್ಕಿಯ ಗರಿ, ಮೈ ಮೇಲೆ ಬಿಳಿಯ ನಿಲುವಂಗಿ, ಕೆಳಗೆ ಸೀರೆಯ ನೆರಿಗೆ, ಅಂಗಿಯ ಮೇಲೆ ಬಣ್ಣ ಬಣ್ಣದ ಪಟ್ಟೆಯ ದಾರ.. ಹೀಗೆ ಇವರದ್ದು ವಿಶಿಷ್ಟ ವೇಷ .ಕಾಲಿಗೆ ಗೆಜ್ಜೆ ಕಟ್ಟಿಕೊಂಡು ವೃತ್ತಾಕಾರವಾಗಿ ನಿಂತು ಹಾಡುತ್ತಾ, ನೃತ್ಯ ಮಾಡುವುದನ್ನು ನೋಡುವುದೇ ಒಂದು ಹಬ್ಬ.

ಉಡುಪಿಯ ಸರಳೇಬೆಟ್ಟು ಕೋಡಿ, ಬಸ್ಮೇಶ್ವರ ಮರಾಠ ಸಮಾಜದ ಸಂಘದ ಸದಸ್ಯರ ಹೋಳಿ ಕುಣಿತ ನೋಡುವುದೇ ಒಂದು ಚಂದ. ಇವರ ಕುಣಿತ ಬಣ್ಣ ರಹಿತವಾಗಿದ್ದು ಎಂಬುದು ವಿಶೇಷ.ಜಿಲ್ಲೆಯ ಅನೇಕ ಕಡೆಗಳಲ್ಲಿ ಈ ದೃಶ್ಯ ಈಗ ಕಂಡುಬರುತ್ತಿದೆ.

Edited By :
Kshetra Samachara

Kshetra Samachara

17/03/2022 07:59 pm

Cinque Terre

4.49 K

Cinque Terre

0

ಸಂಬಂಧಿತ ಸುದ್ದಿ