ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ; ಚಂಡಿಕಾಯಾಗ

ಮುಲ್ಕಿ: ಮುಲ್ಕಿ ಸಮೀಪದ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಹಾಗೂ ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾಯಾಗ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಹಾಗೂ ಅರ್ಚಕ ವೇ.ಮೂ. ಅನಂತಮೂರ್ತಿ ಬಟ್ ನೇತೃತ್ವದಲ್ಲಿ ನಡೆಯಿತು

ಮಾ.15 ಮಂಗಳವಾರ ಪ್ರಾತಃಕಾಲ ಕಾರ್ನಾಡು ಕಟ್ಟೆಯಲ್ಲಿ ಶ್ರೀದೇವಿಯ ಪ್ರತಿಬಿಂಬ ಪ್ರತಿಷ್ಠೆ ,ಪೂಜೆ, ಹಣ್ಣುಕಾಯಿ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಯಾಗ ನಡೆಯಿತು.

ಶ್ರೀ ಕ್ಷೇತ್ರ ಬಪ್ಪನಾಡಿಗೆ ಫಲಪುಷ್ಪ ಕಾಣಿಕೆ, ಪ್ರಾರ್ಥನೆ ಸಲ್ಲಿಸಲಾಯಿತು.ಬಳಿಕ ಮಹಾಗಣಪತಿ ದೇವರಿಗೆ, ವೀರಭದ್ರ ದೇವರಿಗೆ ಮಹಾಪೂಜೆ ನಡೆದು ಮಹಮ್ಮಾಯಿ ಸನ್ನಿಧಿಯಲ್ಲಿ ಮಹಾಪೂಜೆ ದರ್ಶನ ಪ್ರಸಾದ ಕಾಣಿಕೆ, ಶ್ರೀ ಧೂಮಾವತಿ ದೈವದ ಭಂಡಾರ ಏರುವ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆಯಿತು.

ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ ಶೆಟ್ಟಿಗಾರ್, ವಾಸುದೇವ ಎಚ್ ಶೆಟ್ಟಿಗಾರ್, ಭಾಸ್ಕರ ಆರ್ ಶೆಟ್ಟಿಗಾರ ಉಡುಪಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

15/03/2022 01:18 pm

Cinque Terre

11.44 K

Cinque Terre

1

ಸಂಬಂಧಿತ ಸುದ್ದಿ