ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಮೆರಿಕ ಮೂಲದ ಮಗುವಿಗೆ ಕೃಷ್ಣಮಠದಲ್ಲಿ ಅನ್ನಪ್ರಾಶನ ಶಾಸ್ತ್ರ!

ಉಡುಪಿ: ಅಮೆರಿಕ ಮೂಲದ ದೃಢವ್ರತ ಹಾಗೂ ಜರ್ಮನಿ ಮೂಲದ ಗಂಧರ್ವಿಕಾ ದಂಪತಿ ಪುತ್ರ ದೇವೇಶನಿಗೆ ಉಡುಪಿ ಕೃಷ್ಣ ಮಠದಲ್ಲಿ ಅನ್ನಪ್ರಾಶನ ಶಾಸ್ತ್ರ ನೆರವೇರಿಸಲಾಯಿತು.

ದೃಢವ್ರತ ಅವರು 15 ವರ್ಷದವರಿದ್ದಾಗಲೇ ಚಿತ್ರ ಕಲಾವಿದರಾಗಿ ತಮಿಳುನಾಡಿನ ಮಹಾಬಲಿಪುರಂಗೆ ಬಂದು ಚಿತ್ರಕಲೆ, ಶಿಲ್ಪಶಾಸ್ತ್ರವನ್ನು ಓದಿದ್ದರು. ಗಂಧರ್ವಿಕಾ ಮನಃಶಾಸ್ತ್ರ ಪದವಿಯನ್ನು ಮದ್ರಾಸ್ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ. ದಂಪತಿಗೆ ಭಾರತದ ಸಂಸ್ಕೃತಿ, ಹಿಂದೂ ಧರ್ಮದ ಬಗ್ಗೆ ಅಪಾರ ಒಲವು ಇದ್ದು, ಉತ್ತರ ಪ್ರದೇಶ ರಾಜ್ಯದ ವೃಂದಾವನದ ಶ್ರೀ ಸತ್ಯನಾರಾಯಣ ಬಾಬಾಜಿಯವರು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲು ತಿಳಿಸಿದರಂತೆ. ಅದರಂತೆ ದಂಪತಿ ಕೃಷ್ಣ ಮಠದಲ್ಲಿ ಅನ್ನಪ್ರಾಶನ ನಡೆಸಿದರು. ಶ್ರೀ ಕೃಷ್ಣಮಠದಲ್ಲಿ ಮಗುವಿಗೆ ಅನ್ನಪ್ರಾಶನ ಸೇವೆ ನಡೆಸಿದ ದಂಪತಿ ಬಳಿಕ ಪರ್ಯಾಯ ಕೃಷ್ಣಾಪುರ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು. ವಿದೇಶಿ ದಂಪತಿ ಕೆಲ ಕಾಲ ಉಡುಪಿಯಲ್ಲೇ ನೆಲೆಸುವ ಇರಾದೆ ಹೊಂದಿದ್ದಾರೆ.

Edited By : Vijay Kumar
Kshetra Samachara

Kshetra Samachara

08/03/2022 01:40 pm

Cinque Terre

3.29 K

Cinque Terre

1

ಸಂಬಂಧಿತ ಸುದ್ದಿ