ಬಂಟ್ವಾಳ: ʼಭೂ ಕೈಲಾಸʼ ಖ್ಯಾತಿಯ ಬಂಟ್ವಾಳ ತಾಲೂಕಿನ ಕಾರಿಂಜ ಪಾರ್ವತಿ- ಪರಮೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಹಿಂಜಾವೇ ಬಂಟ್ವಾಳ ತಾಲೂಕು ಘಟಕ ಇದೇ ಮೊದಲ ಬಾರಿಗೆ ʼಶಿವಮಾಲಾಧಾರಣೆʼಯ ಹೊಸ ಸಂಪ್ರದಾಯ ಹುಟ್ಟು ಹಾಕಿರುವ ಹಿನ್ನೆಲೆಯಲ್ಲಿ ಹಿಂಜಾವೇ ಕ್ಷೇತ್ರೀಯ ಸಂಘಟನೆ ಕಾರ್ಯದರ್ಶಿ ಜಗದೀಶ್ ಕಾರಂತ ಪಾಲ್ಗೊಂಡು ಶಿವಮಾಲಾಧಾರಿಗಳಿಗೆ ಸ್ಫೂರ್ತಿ ತುಂಬಿದರು.
ಹೆದ್ದಾರಿಯ ಕಾರಿಂಜ ಕ್ರಾಸ್ ದ್ವಾರ ಬಳಿಯಿಂದ 400ಕ್ಕೂ ಅಧಿಕ ಮಾಲಾಧಾರಿಗಳು ಶಿವನಾಮ ಜಪಿಸುತ್ತಾ ಕ್ಷೇತ್ರದತ್ತ ಹೆಜ್ಜೆ ಹಾಕಿದರು. ಜಗದೀಶ್ ಕಾರಂತರೂ ಸಾಥ್ ನೀಡಿದರು. ಕ್ಷೇತ್ರದಲ್ಲಿ ಸಂಪನ್ನಗೊಂಡ ಯಾತ್ರೆ , ಕೆರೆಯಲ್ಲಿ ಶುಚೀರ್ಭೂತರಾಗಿ ಪಾರ್ವತಿ- ಪರಮೇಶ್ವರರು ವಿರಾಜಮಾನವಾಗಿರುವ ಬೆಟ್ಟವನ್ನು ಶಿವನಾಮ ಸ್ಮರಣೆಯೊಂದಿಗೆ ಏರಿದರು. ಫೆ.27 ರಂದು ಹಿಂಜಾವೇ ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದು, ನಾಳೆ ಬೆಳಿಗ್ಗೆ ಮಾಲೆ ವಿಸರ್ಜಿಸುವರು.
ಹಿಂಜಾವೇ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಪ್ರಶಾಂತ್ ಬಂದ್ಯೋಡ್, ರವಿರಾಜ್ ಕಡಬ, ರತ್ನಾಕರ ಶೆ್ಟಿ ಕಲ್ಲಡ್ಕ, ಜಗದೀಶ್ ನೆತ್ತರಕೆರೆ, ನರಸಿಂಹ ಮಾಣಿ ಮತ್ತಿತರರು ಉಪಸ್ಥಿತರಿದ್ದರು. ಕಾರಿಂಜ ಕ್ಷೇತ್ರ ಸುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಕ್ಷೇತ್ರ ವಠಾರದಲ್ಲಿ ಮೊದಲ ಹಂತವಾಗಿ ನಡೆದ ಪ್ರತಿಭಟನೆ ಸಭೆಯಲ್ಲಿ ಭಾಗವಹಿಸಿದ್ದ ಜಗದೀಶ್ ಕಾರಂತರು ಮಹಾಶಿವರಾತ್ರಿಯಂದು ಶಿವಮಾಲಾಧರಣೆ ಮೂಲಕ ಕ್ಷೇತ್ರಕ್ಕೆ ಯಾತ್ರೆ ಆರಂಭಿಸುವಂತೆ ಕರೆ ನೀಡಿದ್ದುಇಲ್ಲಿ ಉಲ್ಲೇಖನೀಯ.
Kshetra Samachara
02/03/2022 08:02 am