ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ನೇಮೋತ್ಸವದ ಪ್ರಯುಕ್ತ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆದು ಧ್ವಜಸ್ತಂಭ ಮುಹೂರ್ತ, ಸಂಜೆ ದೊಂಪ ಏರುವುದು, ರಾತ್ರಿ ಭಂಡಾರ ಹೊರಡುವ ಕಾರ್ಯಕ್ರಮ ನಡೆಯಿತು. ರಾತ್ರಿ ಫ್ರೆಂಡ್ಸ್ ಕ್ಲಬ್ ಕೊಲ್ನಾಡು ವತಿಯಿಂದ ಮಹಾ ಅನ್ನಸಂತರ್ಪಣೆ ನಡೆದು ಶ್ರೀ ಕೋರ್ದಬ್ಬು ತನ್ನಿಮಾನಿಗ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಭಾನುವಾರ ಸಂಜೆ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭ ಕೊಲ್ನಾಡುಗುತ್ತು ಕಿರಣ್ ಕುಮಾರ್ ಶೆಟ್ಟಿ (ಗುತ್ತಿನಾರ್), ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷರಾದ ಜೈ ಕೃಷ್ಣಶೆಟ್ಟಿ ಕಲ್ಲಿ ಮಾರು, ಬೆಳ್ಳಾಯರು ಕೊಲ್ನಾಡು ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು 50 ವರ್ಷಗಳಿಂದ ಕೋರ್ದಬ್ಬು ದೈವ ತೆರಿಗೆಯನ್ನು ಮಾಡಿಕೊಂಡು ಬಂದ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ ನಲಿಕೆ ಅವರನ್ನು ಬಂಗಾರದ ಬಳೆ ಹಾಕಿ ಗೌರವಿಸಲಾಯಿತು.
Kshetra Samachara
27/02/2022 10:42 pm