ಬ್ರಹ್ಮಾವರ: ಸಾಲಿಕೇರಿಯ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠೆ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ಜರುಗಿತು.
ಈ ಸಂಬಂಧ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ದೇವಸ್ಥಾನಗಳನ್ನು ಕಟ್ಟುವುದರ ಜೊತೆ ಉಳಿಸಿಕೊಂಡು ಕೆಲವೊಂದು ಆಚರಣೆ ಮತ್ತು ನಿಯಮಗಳನ್ನು ರೂಡಿಮಾಡಿಕೊಳ್ಳ ಬೇಕು.ಕರಾವಳಿ ಜಿಲ್ಲೆಯ ಪದ್ಮಶಾಲಿ ಜನಾಂಗದ 16 ದೇವಸ್ಥಾನಗಳಿಗೆ ಏಕರೂಪದ ಪೂಜಾ ಪದ್ದತಿ ಇರಬೇಕು. ಸಾಮಾಜಕ್ಕೆ ಮಾರ್ಗದರ್ಶನ ಮಾಡ ಬಲ್ಲ ಗುರುಪೀಠ ಇದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಘು ಶೆಟ್ಟಿಗಾರ್ ಕುಂಚಿಮನೆ ಮತ್ತು 6 ಮಾಗಣೆ ಮೋಕ್ತೇಸರರನ್ನು ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮೋಕ್ತೇಸರ ಬಾಲಕೃಷ್ಣ ಶೆಟ್ಟಿಗಾರ್ , ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭಗವಾನ್ ದಾಸ್ ಕಿನ್ನಿಮೂಲ್ಕಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
15/02/2022 06:32 pm