ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶ್ರೀ ಜೋಗಿದೊಟ್ಟು ಸಾವಿರಾಳು ಧೂಮಾವತಿ ದೈವಗಳ ನೇಮೋತ್ಸವ

ಮುಲ್ಕಿ: ಮುಲ್ಕಿ ಸಮೀಪದ ಕವತ್ತಾರು ಶ್ರೀ ಜೋಗಿದೊಟ್ಟು ಸಾವಿರಾಳು ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.

ನೇಮೋತ್ಸವದ ಕಾರ್ಯಕ್ರಮಗಳ ಅಂಗವಾಗಿ ಫೆ.11ರ ಶುಕ್ರವಾರ ವಿಶೇಷ ಪ್ರಾರ್ಥನೆ ಹಾಗೂ ಕಂಬಳಬಾಳಿಕೆ ಮೈಂದು ಶೆಟ್ರ ಮನೆಯವರಿಂದ ಭಂಡಾರ ಇಳಿಯುವ ತಂಬಿಲ ನಡೆಯಿತು.

ಫೆ12 . ಶನಿವಾರ ಮಧ್ಯಾಹ್ನ ದೈವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ರಾತ್ರಿ 10 ಗಂಟೆಗೆ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.

ನೇಮೋತ್ಸವ ದಲ್ಲಿ ಸಾವಿರಾರು ಭಕ್ತಾದಿಗಳು ಬಂಡಿ ಎಳೆದು ಸೂಟೆ ದಾರದಲ್ಲಿ ಭಾಗವಹಿಸಿ ಪುನೀತರಾದರು.

ಈ ಸಂದರ್ಭ ದೈವಸ್ಥಾನದ ಆಡಳಿತದಾರ ಗುತ್ತಿನಾರ್ ದೊಡ್ಡಣ್ಣ ಶೆಟ್ಟಿ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ ಡಿ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

13/02/2022 10:28 am

Cinque Terre

5.66 K

Cinque Terre

0

ಸಂಬಂಧಿತ ಸುದ್ದಿ