ಕುಂದಾಪುರ: ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಬಂದಿದ್ದು ಪ್ರಾಂಶುಪಾಲರು ಮನವರಿಕೆ ಮಾಡಲು ಯತ್ನಿಸಿದ್ದಾರೆ.ವಿದ್ಯಾರ್ಥಿ ನಿಯರಿಗೆ ಸರ್ಕಾರದ ಆದೇಶವನ್ನು ಪ್ರಾಂಶುಪಾಲರು ತಿಳಿಸಿದರು.ಆದರೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹೋಗಲು ಪಟ್ಟು ಹಿಡಿದರು.ಈ ಸಂದರ್ಭ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದ ಪ್ರಾಂಶುಪಾಲರು ಅಲ್ಲಿ ಕೂರಲು ವ್ಯವಸ್ಥೆ ಮಾಡಿದರು.
ಕಳೆದ ವಾರ ಗೇಟಿನಿಂದ ಹೊರಗೆ ಕುಳಿತು ಪ್ರತಿಭಟಿಸಿದ ವಿದ್ಯಾರ್ಥಿನಿಯರು,ಇವತ್ತು ಕಾಲೇಜು ಕೊಠಡಿಯಲ್ಲಿ ಕುಳಿತಿದ್ದಾರೆ.
Kshetra Samachara
07/02/2022 11:50 am