ಮುಲ್ಕಿ: ಮುಲ್ಕಿ ಸಮೀಪದ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ ಹಾಗೂ ಕಾಲಾವಧಿ ಜಾತ್ರೆ ಪ್ರಯುಕ್ತ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು
ಕ್ಷೇತ್ರದಲ್ಲಿ ಪ್ರಾತಃಕಾಲ ವೇ.ಮೂ. ಏಳಿಂಜೆ ಶ್ರೀಧರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಶ್ರೀ ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ ಸಾಮೂಹಿಕ ಆಶ್ಲೇಷಾ ಬಲಿ ಸೇವೆ ನಡೆಯಿತು. ಮಧ್ಯಾಹ್ನ ತಿರುಪತಿ ದೇವರಿಗೆ ಕಾಣಿಕೆ ಅರ್ಪಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಜಾರಂದಾಯ ಗುಡ್ಡೆ ಧೂಮಾವತಿ ಸರಳ ಧೂಮಾವತಿ ಬಂಟ ದೈವಗಳ ನೇಮೋತ್ಸವ, ಪವಿತ್ರ ತಾಕೊಡೆ ಮರದ ಬಳಿ ಸರಳ ಧೂಮಾವತಿ ಮತ್ತು ಬಂಟ ದೈವಗಳ ಆಗಮನ, ಶ್ರೀ ಕಾಂತಬಾರೆ ಬೂದಬಾರೆ ಯವರ ವೀರ ಚರಿತ್ರೆಯ ಪಠಣ (ಬೀರ) ವಿಜೃಂಭಣೆಯಿಂದ ನಡೆಯಿತು.
ರಾತ್ರಿ ದೈವಗಳ ಭಂಡಾರ ನಿರ್ಗಮನ ನಡೆದು ಕುಟುಂಬದ ವರ್ತೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಮುಲ್ಕಿ ನಪಂ ಸದಸ್ಯ ಯೋಗೀಶ್ ಕೋಟ್ಯಾನ್, ಬಳಕುಂಜೆ ಗ್ರಾಪಂ ಸದಸ್ಯ ಆನಂದ, ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್ ಮತ್ತಿತರರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮ ಕ್ಷೇತ್ರದ ದಾಮೋದರ ದಂಡಕೇರಿ, ಗಂಗಾಧರ ಪೂಜಾರಿ, ಶೀನ ಪೂಜಾರಿ, ಹರೀಂದ್ರ ಸುವರ್ಣ, ಎಲ್ಲಪ್ಪ ಟಿ ಸಾಲ್ಯಾನ್, ಚಂದ್ರಹಾಸ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/02/2022 04:32 pm