ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿರಿಮಂಜೇಶ್ವರ: ದೇವಸ್ಥಾನ ಯಾಗಶಾಲೆ, ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ

ಬೈಂದೂರು: "ಪುರಾಣ ಪ್ರಸಿದ್ಧ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನ ಸಮುದ್ರ ತೀರದಲ್ಲಿದ್ದು ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿದೆ. ಈಶಾನ್ಯ ಭಾಗದಲ್ಲಿ ಉದ್ಭವಿಸಿರುವ ಬಿಲ್ವಪತ್ರೆ ಮರಕ್ಕೆ ವಿಶೇಷ ಶಕ್ತಿ ಇದೆ. ದೇವಸ್ಥಾನದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು" ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಯಾಗಶಾಲೆ ಹಾಗೂ ಆಡಳಿತ ಕಚೇರಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ. ಪ್ರಕಾಶ್ ಐತಾಳ್ ಮಾತನಾಡಿ, ದೇವಸ್ಥಾನ ಪೌರಾಣಿಕ ಇತಿಹಾಸ ಹೊಂದಿದ್ದು, ಕೆರೆಯ ಕಾಯಕಲ್ಪ ಸಹಿತ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಎಂದರು. ಅರ್ಚಕ ರಾಮಕೃಷ್ಣ ಭಟ್ ಪೂಜಾ ವಿಧಿ-ವಿಧಾನ ನೆರವೇರಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ನಾವಡ, ಕಾರ್ಯದರ್ಶಿ ಬಾಲಕೃಷ್ಣ ಶ್ಯಾನುಭಾಗ್, ಮಾಜಿ ಅಧ್ಯಕ್ಷ ಉಮೇಶ್ ಶ್ಯಾನುಭಾಗ್, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಗೀತಾ, ಆಡಳಿತ ಮಂಡಳಿ ಸದಸ್ಯರು, ಕಿರಿಮಂಜೇಶ್ವರ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/01/2022 03:55 pm

Cinque Terre

4.78 K

Cinque Terre

0

ಸಂಬಂಧಿತ ಸುದ್ದಿ