ಕೋಟೇಶ್ವರ: ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಧ್ವಜ ಮರ ಮರು ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.1955 ರಲ್ಲಿ ಪ್ರತಿಷ್ಟಾಪಿಸಲಾದ ಇಲ್ಲಿನ ಧ್ವಜ ಮರವನ್ನು ವಿಧಿವತ್ತಾಗಿ ಮರುಸ್ಥಾಪಿಸಲಾಗುತ್ತಿದೆ.ಹಿರಿಯ ರಥ ಶಿಲ್ಪಿ ರಾಜಗೋಪಾಲಾಚಾರ್ಯ ಇದರ ನೇತೃತ್ವ ವಹಿಸಿದ್ದಾರೆ.ಪುರಾತನ ಧ್ವಜಮರ ತೆರವು ಸಂದರ್ಭ ಧ್ವಜಮರದಡಿಯಲ್ಲಿ ನಿಧಿ ಕುಂಭ ಸಿಕ್ಕಿದೆ. ನಿಧಿ ಕುಂಬದಲ್ಲಿ ಹಳೆಯ ಹಿತ್ತಾಳೆ, ಕಂಚು, ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳು ಸಿಕ್ಕಿವೆ. ಇದೇ ಶುಕ್ರವಾರ ನೂತನ ಮರ ಧ್ವಜವನ್ನು ಮರುಸ್ಥಾಪಿಸಲಾಗುತ್ತಿದ್ದು ,ಫೆಬ್ರವರಿ ಹತ್ತರಂದು ಪ್ರತಿಷ್ಠೆ ನಡೆಯಲಿದೆ ಎಂದು ಶಿಲ್ಪಿ ರಾಜಗೋಪಾಲಾಚಾರ್ಯರು ಮಾಹಿತಿ ನೀಡಿದ್ದಾರೆ.
Kshetra Samachara
24/01/2022 03:03 pm