ಶಿವಪುರ: ರಾಜ್ಯ ಸರ್ಕಾರದ ಮಹತ್ವದ ನಿರ್ಣಯದಂತೆ ಉಡುಪಿ ಜಿಲ್ಲೆಯ ಹೆಬ್ರಿ ಶಿವಪುರ ಸಮೀಪ ಕೆರೆಬೆಟ್ಟುವಿನಲ್ಲಿರುವ ಸುಮಾರು 13 ಎಕ್ರೆ ಭೂಮಿಯಲ್ಲಿ ಗೋಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ .ಈ ಗೋಶಾಲೆಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ಶ್ರೀ ಪೇಜಾವರ ವಿಶ್ವ ಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದ ಶ್ರೀ ವಿಶ್ವೇಶಕೃಷ್ಣ ಗೋ ಸೇವಾ ಟ್ರಸ್ಟ್ ರಿ . ವಹಿಸಿಕೊಳ್ಳುವಂತೆ ಸರ್ಕಾರ ನಿವೇದಿಸಿಕೊಂಡಿದೆ . ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳು ಹಾಗೂ ಟ್ರಸ್ಟ್ ನ ವಿಶ್ವಸ್ಥರುಗಳಾದ ಪದ್ಮನಾಭ ಆಚಾರ್ಯ , ಗುರುದಾಸ್ ಶೆಣೈ ಹೆಬ್ರಿ ತಹಶೀಲ್ದಾರ್ ಪುರಂದರ , ಹೆಬ್ರಿ ತಾಲೂಕು ಪಶುವೈದ್ಯಾಧಿಕಾರಿ ಡಾ ಪರಶುರಾಮ ಕೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲ ಹಂತದಲ್ಲಿ ಸರ್ಕಾರದ ಅನುದಾನವನ್ನು ಬಳಸಿ ಇಡೀ ನಿವೇಶನಕ್ಕೆ ತಡೆ ಬೇಲಿ ಹಾಕುವುದು , ಹಾಗೂ ಸ್ಥಳದಲ್ಲಿರುವ ಕೆರೆ ಪುನರುತ್ಥಾನ ಕಾರ್ಯಗಳನ್ನು ಪ್ರಧಾನ ಮಂತ್ರಿ ಉದ್ಯೋಗಖಾತ್ರಿ ಯೋಜನೆಯ ಸಹಯೋಗದೊಂದಿಗೆ ನಡೆಸಲಾಗುವುದು. ಮುಂದಿನ ಹಂತದಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ತಹಶೀಲ್ದಾರ್ ಹಾಗೂ ಪಶುವೈದ್ಯಾಧಿಕಾರಿಗಳು ವಿವರಿಸಿದರು.ಗೋಶಾಲೆಯಲ್ಲಿ ಸಂರಕ್ಷಿಸಬಹುದಾದ ಗೋವುಗಳೆಷ್ಟು ಎನ್ನುವುದನ್ನು ಮೊದಲು ನಿರ್ಧರಿಸಬೇಕ .ಬಳಿಕ ಪಶು ಆಹಾರ ದಾಸ್ತಾನು , ಗೋಮಯ ಸಂಗ್ರಹ ಸ್ಥಳ , ನೀರಿನ ವ್ಯವಸ್ಥೆ , ಗೋಶಾಲೆಯ ತ್ಯಾಜ್ಯದ ನೀರು ಹರಿಯುವ ವ್ಯವಸ್ಥೆ ,ಮೃತಪಟ್ಟ ಹಸುಗಳನ್ನು ಹೂಳುವುದು, ಕಾರ್ಮಿಕರ ವಸತಿ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಶ್ರೀಗಳು ಸಲಹೆ ನೀಡಿದರು .
ಸ್ಥಳೀಯರಾದ ರಮೇಶ್ ಪೂಜಾರಿ , ಸುರೇಶ್ ಶೆಟ್ಟಿ ಸ್ಥಳದ ಮಾಹಿತಿ ನೀಡಿ ಗ್ರಾಮಸ್ಥರ ಪೂರ್ಣ ಸಹಕಾರ ದೊರೆಯುವ ಭರವಸೆ ನೀಡಿದರು . ಸುಬ್ರಹ್ಮಣ್ಯ ಭಟ್ , ಸಗ್ರಿ ಅನಂತ ಭಟ್ , ಕೃಷ್ಣ ಭಟ್ , ಶಿವಪುರ ವಾಸುದೇವ ಭಟ್ , ಮಹಾಬಲೇಶ್ವರ ಅಡಿಗ , ಪೆರಂಪಳ್ಳಿ ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
24/01/2022 12:05 pm