ವರದಿ: ರಹೀಂ ಉಜಿರೆ
ಕೋಟ: ಸಂತಾನಭಾಗ್ಯವಿಲ್ಲದವರಿಗೆ ಸಂತಾನ ಕರುಣಿಸುತ್ತಾಳೆ ಈ ತಾಯಿ. ವೈದ್ಯಕೀಯ ಪ್ರಪಂಚಕ್ಕೂ ಮಿಗಿಲಾಗಿ ಈ ತಾಯಿಯನ್ನು ನಂಬುತ್ತಾರೆ ಭಕ್ತರು. ಅಂತಹ ಹಲವು ಮಕ್ಕಳ ತಾಯಿಯ ಜಾತ್ರೋತ್ಸವ ಸರಳವಾಗಿ ಸಂಪನ್ನಗೊಂಡಿತು.
ಇದು ಉಡುಪಿಯ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ದೃಶ್ಯ. ಇಲ್ಲಿನ ಲಿಂಗಾಕೃತಿಯ ಕಲ್ಲುಗಳನ್ನು ಸ್ಪರ್ಶ ಮಾಡಿದರೆ, ಇವುಗಳಿಗೆ ತೈಲ ಹಚ್ಚಿದರೆ ಚಮತ್ಕಾರ ನಡೆಯುತ್ತದೆ ಎಂಬುದು ಪ್ರತೀತಿ. ಮಕ್ಕಳಿಲ್ಲದವರಿಗೆ ಇಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಪ್ರಕರಣಗಳು ಇಲ್ಲಿ ಬಗೆಹರಿದಿವೆ ಎನ್ನುತ್ತಾರೆ ತಾಯಿ ಭಕ್ತರು. ಇಂತಹ ಹಲವು ಮಕ್ಕಳ ತಾಯಿಯ ಜಾತ್ರೋತ್ಸವ ಸರಳವಾಗಿ ಸಂಪ್ರದಾಯಬದ್ಧವಾಗಿ ನೆರವೇರಿತು..
ಇಲ್ಲಿ ಮಕ್ಕಳ ಫಲವನ್ನು ಕಂಡವರು ಇಂದಿಗೂ ಕೂಡ ಆ ಮಕ್ಕಳನ್ನು ಸ್ಮರಿಸುತ್ತಾರೆ. ಜೀವನೋತ್ಸಾಹವನ್ನು ತಂದುಕೊಟ್ಟಿದಕ್ಕೆ ಕೃತಜ್ಞರಾಗುತ್ತಾರೆ. ಮಕ್ಕಳಾದ ಬಳಿಕ ಮೊದಲಿಗೆ ಈ ಕಾರಣಿಕ ಮಕ್ಕಳ ದರ್ಶನವನ್ನು ಪಡೆಯುತ್ತಾರೆ. ಮಕ್ಕಳಾಗುವುದಿಲ್ಲ ಎಂದು ರಿಪೋರ್ಟ್ ನೀಡಿದ್ದ ವೈದ್ಯರೇ ಚಕಿತಗೊಳ್ಳುವಂತೆ ಇಲ್ಲಿ ಸಂತಾನ ಪ್ರಾಪ್ತಿಯಾದ ಕತೆಗಳಿವೆ.
ಒಟ್ಟಾರೆ ಅಮೃತೇಶ್ವರಿ, ಮಕ್ಕಳನ್ನು ಕರುಣಿಸುವ ಮಹಾತಾಯಿ ಎಂಬ ಬಿರುದನ್ನು ಪಡೆದಿದ್ದಾಳೆ. ಇಂತಹ ತಾಯಿಯ ಜಾತ್ರೆಯನ್ನು ಈ ವರ್ಷ ಸೀಮಿತ ಭಕ್ತರು ಕೂಡಿ ಸರಳವಾಗಿ ಆಚರಣೆ ಮಾಡಿ ಸಂಪ್ರೀತರಾದರು.
Kshetra Samachara
12/01/2022 07:48 pm