ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್‌ ಹಿನ್ನಲೆ: ಅತ್ತೂರು ಸಂತ ಲಾರೆನ್ಸ್‌ ಚರ್ಚ್ ನ ವಾರ್ಷಿಕ ಜಾತ್ರಾ ಮಹೋತ್ಸವ ಮುಂದೂಡಿಕೆ

ಕಾರ್ಕಳ: ರಾಜ್ಯದಲ್ಲಿ ಕೋವಿಡ್-19 ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ, ಜನಸಾಮಾನ್ಯರ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜನವರಿ 16 ರಿಂದ 27 ರವರೆಗೆ ನೆರವೇರಬೇಕಿದ್ದ ಅತ್ತೂರು-ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ ಎಂದು ಬಸಿಲಿಕಾದ ನಿರ್ದೇಶಕರಾದ ವಂ|ಆಲ್ಬನ್‌ ಡಿʼಸೋಜಾ ತಿಳಿಸಿದ್ದಾರೆ.

ಮುಂದೂಡಲ್ಪಟ್ಟ ವಾರ್ಷಿಕ ಮಹೋತ್ಸದ ದಿನಗಳನ್ನು ಸೂಕ್ತ ಸಮಯದಲ್ಲಿ ಭಕ್ತಾದಿಗಳಿಗೆ ತಿಳಿಸಲಾಗುವುದು, ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Edited By :
Kshetra Samachara

Kshetra Samachara

12/01/2022 10:57 am

Cinque Terre

6.25 K

Cinque Terre

0

ಸಂಬಂಧಿತ ಸುದ್ದಿ