ಕಾಪು : ಶ್ರೀ ಬ್ರಹ್ಮಲಿಂಗೇಶ್ವರ ಅಯ್ಯಪ್ಪ ಸ್ವಾಮಿ ಭಕ್ತವೃಂದದ 32 ನೇ ವಾರ್ಷಿಕ ಮಹಾ ಪೂಜೆ ಕರಂದಾಡಿ ಬ್ರಹ್ಮಸ್ಥಾನದಲ್ಲಿ ಜರುಗಿತು.
ಪೂರ್ವಾಹ್ನ ಬ್ರಹ್ಮ ಬೈದರ್ಕಳ ಕಲಾಸಂಘ ಕಲ್ಲುಗುಡ್ಡೆ ಇದರ ಸದಸ್ಯರಿಂದ ಶನಿಕಥಾ ಪಾರಾಯಣ ನಡೆಯಿತು.
ಶಿಬಿರದ ಗುರಸ್ವಾಮಿ ಜಯ ಸ್ವಾಮಿ ನೇತೃತ್ವದಲ್ಲಿ ಮಹಾಪೂಜಧಿ ಕಾರ್ಯಗಳು ನೆರವೇರಿದವು.
ಶಿಬಿರವು ವಿಶೇಷ ಪುಷ್ಪ ಅಲಂಕಾರದಿಂದ ಕಂಗೊಳಿಸಿತು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭ ಬ್ರಹ್ಮಲಿಂಗೇಶ್ವರ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ರಾಜಶೇಖರ ರಾವ್, ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಲೀಲಾಧರ್ ಶೆಟ್ಟಿ ಕರಂದಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/01/2022 03:24 pm