ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಒಬ್ಬಂಟಿ ಸ್ವಾಮಿ ಕಾಲ್ನಡಿಗೆ ಯಾನ!

ಕುಂದಾಪುರ: ಶ್ರೀ ಶಬರಿಮಲೆಗೆ ಏಕಾಂಗಿಯಾಗಿ ಪಾದಯಾತ್ರೆಗೆ ಹೋಗುವುದೆಂದರೆ ಅದು ಸುಲಭದ ಮಾತಲ್ಲ, ಬಲು ಕಠಿಣ. ಆದರೆ, ಧರ್ಮಶಾಸ್ತಾನ ಪರಮ ಭಕ್ತ ಶಿವರಾಜ ಅಥಣಿ ಸ್ವಾಮಿಗಳು ʼಸ್ವಾಮಿಯೇ ಶರಣಂ ಅಯ್ಯಪ್ಪ ʼ ಎಂದು ಸ್ಮರಣೆ ಮಾಡುತ್ತಾ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ನಿರಂತರ 4 ವರ್ಷಗಳಿಂದ ಕಾಲ್ನಡಿಗೆ ಯಾನ ಮಾಡುತ್ತಿದ್ದಾರೆ!

ಶ್ರೀ ಶಬರಿಮಲೆ ವರೆಗಿನ 12 ನೂರು ಕಿ.ಮೀ. ನ್ನು 21 ದಿನಗಳಲ್ಲಿ ಕಾಲ್ನಡಿಗೆಯಲ್ಲಿಯೇ ಕ್ರಮಿಸುವ ಶಿವರಾಜ ಅಥಣಿ ಸ್ವಾಮಿಗಳು,

ಗೋಕಾಕ್, ಹಳಿಯಾಳ, ಕುಮಟಾ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು, ಗುರುವಾಯೂರು ಹೀಗೆ ಪಾದಯಾತ್ರೆಯಿಂದ ಪಂಪಾ ನದಿ ತಲುಪಿ, ಅಲ್ಲಿ ಪುಣ್ಯಸ್ನಾನ ಮಾಡಿ ಶಬರಿಮಲೆ ಸನ್ನಿಧಿ ತಲುಪುತ್ತಾರೆ. ಅಲ್ಲಿಂದ ಪವಿತ್ರವಾದ 18 ಮೆಟ್ಟಿಲೇರಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ʼದಿವ್ಯ ದರ್ಶನʼ ಪಡೆಯುತ್ತಾರೆ.

ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಸಂತೋಷನಗರ ಹತ್ತಿರ ಶಿವರಾಜ ಸ್ವಾಮಿಗಳ ಪಾದಯಾತ್ರೆ ಸಂದರ್ಭ ಸ್ಥಳೀಯರು ಕುಡಿಯುವ ನೀರು, ಹಣ್ಣು ಹಂಪಲು ನೀಡಿ, ಶುಭ ಹಾರೈಸಿದರು.

Edited By : Shivu K
Kshetra Samachara

Kshetra Samachara

05/01/2022 07:13 pm

Cinque Terre

5.56 K

Cinque Terre

0

ಸಂಬಂಧಿತ ಸುದ್ದಿ