ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳ ಭಾನುವಾರ ಬೆಳಗ್ಗೆ ಸೀಮೆ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಆರಂಭವಾಗಿದ್ದು, ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಕಂಬಳ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಿತು.
ಸಂಜೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಶಿವರಾಮ್ ಶೆಟ್ಟಿ ಅಜೆಕಾರು, ಉದ್ಯಮಿ ಯದು ನಾರಾಯಣ ಶೆಟ್ಟಿ, ಡಿ.ಕೆ.ಶೆಟ್ಟಿ ಮುಂಬೈ, ಮನೋಹರ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಗೌತಮ್ ಜೈನ್ ಉಪಸ್ಥಿತರಿದ್ದರು.
ಸಾಧಕರ ನೆಲೆಯಲ್ಲಿ ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ನವೀನ್ ಶೆಟ್ಟಿ ಎಡ್ಮೆಮಾರ್, ಮನ್ಸೂರ್ ಮುಲ್ಕಿ, ನರೇಂದ್ರ, ನಾಗೇಶ್ ಕುಲಾಲ್, ಸುಂದರ ಸಾಣೂರು, ಕೃಷ್ಣ ಪೂಜಾರಿ, ಸತೀಶ್ ದೇವಾಡಿಗ, ಕಂಬಳ ಓಟಗಾರ ಅಳದಂಗಡಿ ರವಿ ಅವರನ್ನು ಗೌರವಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ ಸ್ವಾಗತಿಸಿದರು.
ಬಳಿಕ ಅರಮನೆಯ ಬಾಕಿಮಾರು ಗದ್ದೆಯಲ್ಲಿ 'ಕಂಬಳ ಓಟದ ಹಣಾಹಣಿ' ನಡೆಯಿತು. ಸಾವಿರಾರು ಕಂಬಳಾಭಿಮಾನಿಗಳು ಹಾಜರಿದ್ದರು. ಸೋಮವಾರ ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
Kshetra Samachara
26/12/2021 10:58 pm