ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳ ಆರಂಭ

ಮುಲ್ಕಿ: ಸುಮಾರು 400 ವರ್ಷಗಳ ಇತಿಹಾಸವಿರುವ ಮುಲ್ಕಿ ಸೀಮೆ ಅರಸು ಕಂಬಳಕ್ಕೆ ಭಾನುವಾರ ಬೆಳಿಗ್ಗೆ ಚಾಲನೆ ನೀಡಲಾಯಿತು

ಸಂಪ್ರದಾಯದಂತೆ ಕಂಬಳದ ಮಂಜೊಟ್ಟಿಯಲ್ಲಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಡಿ. 25ರಂದು ವಿಧಿವಿಧಾನಗಳು ನಡೆದು ಡಿ 26 ಭಾನುವಾರ ಬೆಳಿಗ್ಗೆ ವೇದಮೂರ್ತಿ ವೆಂಕಟರಾಜ ಉಡುಪ ಅತ್ತೂರುಬೈಲ್ ನೇತೃತ್ವದಲ್ಲಿ ನಾಗಬನದಲ್ಲಿ ಪೂಜೆ ಸಲ್ಲಿಕೆಯಾಗಿ ಅರಮನೆಯ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜಾದಿಗಳು ನೆರವೇರಿತು.

ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅರಮನೆಯ ಬಸದಿಯ ಪ್ರಸಾದ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಪ್ರಸಾದ ಹಾಗೂ ಶ್ರೀ ದೇವರ ಪ್ರಸಾದವನ್ನು ಹಿಡಿದುಕೊಂಡು ಅರಮನೆಯ ಧರ್ಮ ಚಾವಡಿಯಿಂದ ಎರುಬಂಟ ದೈವದ ರಕ್ಷಣೆಯಲ್ಲಿ ವೈಭವದ ಮೆರವಣಿಗೆಯಲ್ಲಿ ಸಾಗಿ ಕಂಬಳದ ಕರೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರಕುಮಾರ್ ಪ್ರಸಾದವನ್ನು ಹಾಕುವುದರಮೂಲಕ ಕಂಬಳಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ಅವರು ಮಾತನಾಡಿ ಕಂಬಳ ತುಳುನಾಡಿನ ಜನಪದ ಹಾಗೂ ಸಾಂಸ್ಕೃತಿಕ ಕ್ರೀಡೆಯಾಗಿದ್ದು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಬಳಿಕ ಸಭಾ ಕಾರ್ಯಕ್ರಮವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಸಸಿಹಿತ್ಲು ಭಗವತಿ ದೇವಸ್ಥಾನದ ಅಪ್ಪು ಶ್ರೀನಿವಾಸ ಪೂಜಾರಿ, ಕದಿಕೆ ಕೇಂದ್ರ ಜುಮ್ಮಾ ಮಸೀದಿಯ ಅಬ್ದುಲ್ ಜೈನಿ, ಹಳೆಯಂಗಡಿ ಸಿ ಎಸ್.ಐ ಚರ್ಚ್ ನ ರೆ. ವಿನಯ ಲಾಲ್ ಬಂಗೇರ, ಉದ್ಘಾಟಿಸಿದರು

ಮುಖ್ಯ ಅತಿಥಿಗಳಾಗಿ ಮಾಜೀ ಸಚಿವ ಅಭಯಚಂದ್ರ ಜೈನ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಎಂ. ಅರವಿಂದ ಪೂಂಜ, ಭುಜಂಗ ಶೆಟ್ಟಿ ಉತ್ರಂಜೆ, ಗೌತಮ್ ಜೈನ್ ಮುಲ್ಕಿ ಅರಮನೆ,ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಾಂತಿ ಶೆಟ್ಟಿ, ಧರ್ಮದರ್ಶಿ ಮೋಹನದಾಸ ಶೆಟ್ಟಿ, ಉದ್ಯಮಿ ಲಿಂಗಪ್ಪ ಶೆಟ್ಟಿ, ವಕೀಲರಾದ ಪದ್ಮರಾಜ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಎಚ್.ವಸಂತ್ ಬೆರ್ನಾಡ್, ಬಂಕಿ ನಾಯ್ಗರು, ಕಿರಣ್ ಶೆಟ್ಟಿ ಕೊಲ್ನಾಡು, ಸೂರ್ಯಕಾಂತ ಜಯ ಸುವರ್ಣ ಮುಂಬೈ, ಕಂಬಳ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ನಾಯಕ್, ಕೋಶಾಧಿಕಾರಿ ವಿಜಯಕುಮಾರ್ ಶೆಟ್ಟಿ, ಎಂ ಕೆ ಹೆಬ್ಬಾರ್, ಶಶೀಂದ್ರ ಸಾಲ್ಯಾನ್, ದಿನೇಶ್ ಸುವರ್ಣ ಬೆಳ್ಳಾಯರು, ಶ್ಯಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀನ್ ಕುಮಾರ್ ಎಡ್ಮೆ ಮಾರ್ ನಿರೂಪಿಸಿದರು.

ಸುಮಾರು 150ಕ್ಕೂ ಹೆಚ್ಚು ಜೋಡಿ ಕೋಣಗಳು ಅರಸು ಕಂಬಳದಲ್ಲಿ ಭಾಗವಹಿಸಿದ್ದು ಭಾನುವಾರ ಸಂಜೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

26/12/2021 03:55 pm

Cinque Terre

11.29 K

Cinque Terre

0

ಸಂಬಂಧಿತ ಸುದ್ದಿ