ಉಡುಪಿ: ಇಂದು ರಾತ್ರಿ ನಾಡಿನೆಲ್ಲೆಡೆ ಕ್ರಿಸ್ಮಸ್ ಸಡಗರ. ಉಡುಪಿಯಾದ್ಯಂತ ಕ್ರೈಸ್ತ ಬಾಂಧವರು ಹಬ್ಬವನ್ನು ಕೋವಿಡ್ ನಿಯಮಾವಳಿಯಂತೆ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದಾರೆ.
ಕ್ರಿಸ್ತ ಹುಟ್ಟಿದ್ದು ಗೋದಲಿಯಲ್ಲಿ. ಇದರ ನೆನಪಿಗಾಗಿ ಕ್ರೈಸ್ತ ಬಾಂಧವರು ಚರ್ಚ್ ನ ಮುಂಭಾಗದಲ್ಲಿ ಗೋದಲಿಯನ್ನು ನಿರ್ಮಿಸುವುದು ವಾಡಿಕೆ.ಅದರಂತೆ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಕೂಡ ಗೋದಲಿಯನ್ನು ನಿರ್ಮಿಸಲಾಗಿದ್ದು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಗೋದಲಿಗೆ ವಿದ್ಯುತ್ ಅಲಂಕಾರ ಮಾಡಲಾಗಿದ್ದು ರಾತ್ರಿ ಹೊತ್ತು ಚರ್ಚ್ ಆವರಣ ಮತ್ತು ನಗರಕ್ಕೆ ಹಬ್ಬದ ಕಳೆ ಬರಲಿದೆ.
Kshetra Samachara
24/12/2021 12:41 pm