ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಕ್ರಿಸ್ ಮಸ್ ಹಬ್ಬದ ತಯಾರಿ ಜೋರಾಗಿದೆ. ಪ್ರಭು ಯೇಸುಕ್ರಿಸ್ತ ಜನ್ಮ ತಾಳಿದ ದಿನದ ಆಚರಣೆಗೆ ಕ್ರೈಸ್ತ ಬಾಂಧವರು ಪೂರ್ವತಯಾರಿ ಮಾಡಿಕೊಂಡಿದ್ದು, ನಗರದ ಚರ್ಚ್ ಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕ್ರೈಸ್ತರ ಮನೆ, ಚರ್ಚ್ ಗಳಲ್ಲಿ ಕ್ರಿಸ್ ಮಸ್ ಹಬ್ಬದ ಸಿದ್ಧತೆ ಜೋರಾಗಿದೆ. ಡಿಸೆಂಬರ್ 25 ರಂದು ಯೇಸುಕ್ರಿಸ್ತನ ಜನನದ ಅಂಗವಾಗಿ ಈಗಾಗಲೇ ಈ ತಿಂಗಳ ಆರಂಭದಿಂದಲೇ ವಿಶೇಷ ಆರಾಧನೆ ಕೂಟಗಳು ನಡೆದಿವೆ.
ಹಬ್ಬದ ನಿಮಿತ್ತ ಮನೆ, ಮನೆಗಳಲ್ಲಿ ಕ್ರಿಸ್ ಮಸ್ ಟ್ರೀ ನೆಟ್ಟು, ಅದನ್ನು ವಿದ್ಯುದೀಪಗಳಿಂದ ಸಿಂಗರಿಸಲಾಗಿದೆ. ಮನೆಯ ಒಳಗೆ, ಹೊರಗೆ ದೀಪಗಳ ಅಲಂಕಾರ ಮಾಡಲಾಗಿದೆ. ಮನೆಗಳಲ್ಲಿ ಕ್ರಿಸ್ ಮಸ್ ಹಟ್ ರಚಿಸಿದ್ದೂ ಗಮನ ಸೆಳೆಯುವಂತೆ ಮಾಡಿದೆ.
ನಗರದ ಮಿಲಾಗ್ರಿಸ್ ಚಚ್೯, ಜೆಪ್ಪು ವೆಲೆಸ್ಸಿಯ ,ಬೆಂದೂರ್ ವೆಲ್ ಚಚ್೯ ಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
Kshetra Samachara
23/12/2021 10:14 pm