ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಶ್ರೀ ಕ್ಷೇತ್ರದಲ್ಲಿ ಧನುರ್ಮಾಸ ಪೂಜೋತ್ಸವ ಸಂಭ್ರಮ

ಮುಲ್ಕಿ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.15ರಿಂದ ಧನುರ್ಮಾಸ ಪೂಜೋತ್ಸವ ಆರಂಭವಾಗಿದ್ದು, ಇಂದು ಪ್ರಾತಃಕಾಲ 7.30ಕ್ಕೆ ವಿಶೇಷ ಪೂಜೆ ಜರುಗಿತು.

ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಲಿಂಗಪ್ಪ ಶೇರಿಗಾರ್ ಮತ್ತು ಬಳಗದಿಂದ ನಾಗಸ್ವರ ವಾದನ ನಡೆಯಿತು.ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.ಸಾವಿರಾರು ಭಕ್ತಾದಿಗಳು ಕೊರೆಯುವ ಚಳಿಯಲ್ಲೂ ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

Edited By : Manjunath H D
Kshetra Samachara

Kshetra Samachara

21/12/2021 03:37 pm

Cinque Terre

6.48 K

Cinque Terre

0

ಸಂಬಂಧಿತ ಸುದ್ದಿ