ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವೈಭವದ ಲಕ್ಷ ದೀಪೋತ್ಸವ ಸಂಪನ್ನ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅತ್ಯಂತ ವೈಭವದಿಂದ ಲಕ್ಷ ದೀಪೋತ್ಸವ ಸಂಪನ್ನಗೊಂಡಿತು.ವರ್ಷಂಪ್ರತಿಯಂತೆ ಈ ವರ್ಷ ಕೂಡ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.ಸಾವಿರ ಸಾವಿರ ದೀಪ ಬೆಳಗಿ ದೇವರಲ್ಲಿ ಪ್ರಾರ್ಥಿಸಿದರು.ನಗರದ ಕಡಿಯಾಳಿ ದೇವಸ್ಥಾನವು ಕೃಷ್ಣಮಠಕ್ಕೆ ಸಂಬಂಧಿಸಿದ ದೇವಿಯ ದೇವಸ್ಥಾನವೂ ಹೌದು.ಇಲ್ಲಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ,ಇದರ ಮಧ್ಯೆಯೂ ವೈಭವದ ದೀಪೋತ್ಸವಕ್ಕೆ ಆಗಮಿಸಿದ ಭಕ್ತರು ಜೀರ್ಣೋದ್ಧಾರ ಕಾರ್ಯ ಶೀಘ್ರ ನೆರವೇರಲೆಂದು ಪ್ರಾರ್ಥಿಸಿದರು.ದೇವಸ್ಥಾನದ ನಾಲ್ಕೂ ದಿಕ್ಕಿನಲ್ಲಿ ಬೆಳಗಿದ ದೀಪಗಳು ರಾತ್ರಿ ಹೊತ್ತು ದೇವಸ್ಥಾನಕ್ಕೆ ವಿಶೇಷ ಭಕ್ತಿಯ ಕಳೆ ತಂದವು.

Edited By : Shivu K
Kshetra Samachara

Kshetra Samachara

04/12/2021 09:52 am

Cinque Terre

6.7 K

Cinque Terre

0

ಸಂಬಂಧಿತ ಸುದ್ದಿ