ಮುಲ್ಕಿ: ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಚತುರ್ದಶಿ ಪ್ರಯುಕ್ತ ಶ್ರೀದೇವರ ವನ ಸವಾರಿ ಜರುಗಿತು.
ದೇವಸ್ಥಾನದಲ್ಲಿ ಪ್ರಾತಃಕಾಲ ಶ್ರೀ ವೆಂಕಟ್ರಮಣ ಹಾಗೂ ವಿಠ್ಠಲ ದೇವರಿಗೆ ಅಭಿಷೇಕ ನಡೆಯಿತು.
ಸಂಜೆ ಶ್ರೀ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧೆಡೆ ಸೇವಾರ್ಥಿಗಳ ಕಟ್ಟೆಪೂಜೆ ಮೂಲಕ ವನದಲ್ಲಿ ಶ್ರೀ ದೇವರನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನಡೆದ ಬಳಿಕ ವನಭೋಜನ ನಡೆಯಿತು.
ಈ ಸಂದರ್ಭ ಅರ್ಚಕ ವೇದಮೂರ್ತಿ ಪದ್ಮನಾಭ ಭಟ್ ಮಾತನಾಡಿ, ಕಾರ್ತಿಕ ಮಾಸದ ದೀಪೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಮೃಗ ಬೇಟೆ ಉತ್ಸವ, ವನಭೋಜನ ಹಾಗೂ ಕಾರ್ತಿಕ ಹುಣ್ಣಿಮೆ, ಕಟ್ಟೆ ಪೂಜೆ ನಡೆಯುತ್ತಿದ್ದು, ಇಂದು ಶ್ರೀದೇವರ ವನಭೋಜನ ನಡೆಯಿತು.
ವನಭೋಜನ ಪುಣ್ಯ ದಿನದಂದು ಸ್ನಾನ ಮಾಡಿ ವನದಲ್ಲಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರೆ ಎಲ್ಲ ದೋಷ ಪರಿಹಾರವಾಗುವುದೆಂಬ ನಂಬಿಕೆ ಇದೆ ಎಂದರು.
ಅರ್ಚಕ ರಮಾನಾಥ ಭಟ್, ಆಡಳಿತ ಮಂಡಳಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/11/2021 10:58 pm