ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಕೇಂದ್ರ, ರಾಜ್ಯದಲ್ಲಿ ಹಿಂದೂ ಸರಕಾರವಿದೆ- ಗೋಹತ್ಯೆ, ಸಾಗಾಣಿಕೆ ನಡೆಸುವವರಿಗೆ ಇದು ತಲೆಯಲ್ಲಿರಲಿ; ಸಚಿವ ಸುನಿಲ್‌ಕುಮಾರ್

ಕಾರ್ಕಳ: ಹಿಂದೂ ವಿಚಾರ ಪದ್ಧತಿ ಎಲ್ಲಿ ದೂರ ಆಗುತ್ತಿದೆಯೋ ಅಲ್ಲಿ ಶಾಂತಿ, ಸಂಸ್ಕೃತಿ, ನೆಮ್ಮದಿಯಿರಲು ಸಾಧ್ಯವಿಲ್ಲ. ಜಗತ್ತಿನ ಬೆಳವಣಿಗೆ ಗಮನಿಸಿದರೆ ಸಾಕಾಗುತ್ತದೆ. ಇನ್ನು ಮುಂದುವರೆದು ಹೇಳುವುದಿದ್ದರೆ ಇದಕ್ಕೆ ಅಪಘಾನಿಸ್ತಾನ ನಿದರ್ಶನವೇ ಸಾಕು ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್‌ಕುಮಾರ್ ಹೇಳಿದ್ದಾರೆ.

ದತ್ತ ಜಯಂತಿ ಅಂಗವಾಗಿ ಡಿ.12ರಂದು ನಗರದಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳದ ವತಿಯಿಂದ ನಡೆಯುವ ಬ್ರಹತ್ ಹಿಂದೂ ಸಂಗಮ ಬ್ರಹತ್ ಶೋಭ ಯಾತ್ರೆಯ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಹಿಂದೂ ಸಂಘಟನೆ, ಚಳುವಳಿಗಳು ಅನಿವಾರ್ಯ. ದತ್ತ ಜಯಂತಿ ಹೆಸರಿನಲ್ಲಿ ಹಿಂದೂ ಸಂಗಮ ರಾಜ್ಯಾದ್ಯಂತ ನಡೆಯಬೇಕು ಸಂಘಟನೆಯ ಆಶಯವಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಆಡಳಿತದಲ್ಲಿರುವುದು ಹಿಂದೂ ಸರಕಾರ. ಅಕ್ರಮ ಚಟುವಟಿಕೆಯಲ್ಲಿ ನಿರತ ದೇಶದ್ರೋಹಿಗಳಿಗೆ ಇದು ತಲೆಯಲ್ಲಿ ಇರಬೇಕು. ಇಂತಹ ಕೃತ್ಯಗಳನ್ನು ಬಿಜೆಪಿ ಸರಕಾರ ಯಾವ ಕಾರಣಕ್ಕೂ ಸಹಿಸುವ ಮಾತೇ ಇಲ್ಲ. ಗೋಹತ್ಯೆ, ಸಾಗಾಣಿಕೆ ಕುರಿತಂತೆ ವಿಶೇಷ ಕಾನೂನನ್ನು ರಾಜ್ಯದಲ್ಲಿ ಜಾರಿಯಲ್ಲಿದೆ. ಮತ್ತಷ್ಟು ಕಠಿಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಹಿಂದೂ ಸರಕಾರವಿದ್ದರೂ ಮತಾತಂರ, ಗೋಹತ್ಯೆ, ಲವ್‌ ಜಿಹಾದ್ ಕೃತ್ಯಗಳು ನಿಂತಿಲ್ಲ. ಹಿಂದೂಗಳ ಸಂಘಟಿತಿಗೊಂಡು ಇದನ್ನು ತಡೆಯಬೇಕು ಎಂದು ಕರೆ ನೀಡಿದರು.

ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್, ಸಂಘದ ಹಿರಿಯರಾದ ಸುರೇಂದ್ರ ಶೆಣೈ, ತಾಲೂಕು ಸಂಚಾಲಕ್ ಚೇತನ್ ಪೇರಲ್ಕೆ, ಪುರಸಭೆ ಅಧ್ಯಕ್ಷೆ ಸುಮಾಕೇಶವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/11/2021 11:59 am

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ