ಮಂಗಳೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಗುರುಗಳಿಗೆ ಪ್ರಶಸ್ತಿ ನೀಡುವ ಮೂಲಕ ಆ ಪ್ರಶಸ್ತಿಗೂ ಗೌರವ ಬಂತು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀ, ಗುರುಗಳ ವ್ಯಕ್ತಿಗತವಾದ ಗುಣಗಳನ್ನು ಗಮನಿಸಿ 'ಪದ್ಮವಿಭೂಷಣ' ನೀಡಲಾಗಿದೆ. ಈ ಪ್ರಶಸ್ತಿ ದೊಡ್ಡದಾಗಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ, ಗುರುಗಳಿಗೆ ವ್ಯಕ್ತಿಗತವಾಗಿ ನೀಡಿರುವುದು ವಿಶೇಷವಾದದ್ದು ಎಂದರು. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು. ಹೀಗಾಗಿ ಪೇಜಾವರ ಶ್ರೀಪಾದರ ಆದರ್ಶದ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಹೇಳಿದರು.
Kshetra Samachara
11/11/2021 11:04 am