ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಬಲಿ ಚಕ್ರವರ್ತಿಯ ಬಾಹುಬಲ- ಮಹನೀಯತೆ ಸಾರುವ 'ಬಲೀಂದ್ರ ಪೂಜಾ ಸೊಬಗು'

ಪುತ್ತೂರು: ವಿಭಿನ್ನ ಸಂಸ್ಕೃತಿ ಹೊಂದಿರುವ ತುಳುನಾಡಿನಲ್ಲಿ ದೀಪಾವಳಿಯನ್ನು ತುಳುನಾಡನ್ನು ಆಳಿದ ಬಲಿ ಚಕ್ರವರ್ತಿಯನ್ನು ಆಹ್ವಾನಿಸುವ ಹಬ್ಬವಾಗಿಯೂ ಆಚರಿಸಲಾಗುತ್ತದೆ. ಬಲೀಂದ್ರನಿಗಾಗಿ ಮನೆ ಬಾಗಿಲಿಗೆ, ದಾರಿಯುದ್ದಕ್ಕೂ ದೀಪಗಳನ್ನು ಜೋಡಿಸುವ ತುಳುವರು ದೀಪಾವಳಿಯಂದು ಬಲೀಂದ್ರ ಮರ ನೆಡುವುದು ಇಲ್ಲಿ ಬೆಳೆದುಬಂದ ಸಂಪ್ರದಾಯ.

ರಾಕ್ಷಸ ವಂಶದ ಬಲಿ ಚಕ್ರವರ್ತಿ ತುಳುನಾಡಿನಲ್ಲಿ ಆಳುತ್ತಿದ್ದ ಸಂದರ್ಭ ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಇ ಸಂದರ್ಭ ದೇವಲೋಕದಲ್ಲಿ ದೇವೇಂದ್ರನ ಸ್ಥಾನ ಪಡೆಯುವ ಮಾರ್ಗವಾಗಿ 99 ಯಜ್ಞಗಳನ್ನೂ ಪೂರೈಸಿದ್ದ. ಇದರಿಂದ ಭೀತಿ, ಅಸೂಯೆಗೊಂಡ ದೇವೇಂದ್ರ ವಿಷ್ಣು ದೇವರಲ್ಲಿ ತನ್ನ ಕಷ್ಟ ಅರುಹಿದಾಗ ಸಮಸ್ಯೆಗೆ ಪರಿಹಾರ ನೀಡುವುದಾಗಿ ಮಹಾವಿಷ್ಣು, ದೇವೇಂದ್ರನಿಗೆ ಭರವಸೆ ನೀಡುತ್ತಾರೆ.

ಆ ಪ್ರಕಾರ 100ನೇ ಯಜ್ಞಕ್ಕೆ ಸಿದ್ಧವಾಗುತ್ತಿದ್ದ ಬಲಿ ಚಕ್ರವರ್ತಿ ಬಳಿ ವಾಮನಾವತಾರದಲ್ಲಿ ಹೋಗಿ ತನ್ನ 3 ಬೇಡಿಕೆ ಈಡೇರಿಸಬೇಕೆಂದು ಹೇಳುತ್ತಾರೆ. ಹಾಗೆ 3 ಪಾದದ ಜಾಗದ ಬೇಡಿಕೆಯನ್ನು ಬಲಿ ಚಕ್ರವರ್ತಿ ಒಪ್ಪಿಕೊಳ್ಳುತ್ತಾನೆ. ಆಗ ವಿಷ್ಣು ಬೃಹದಾಕಾರವಾಗಿ ಬೆಳೆದು ತನ್ನ ಒಂದು ಪಾದವನ್ನು ಭೂಮಿಯಲ್ಲಿಟ್ಟಾಗ ಇಡೀ ಭೂಮಿಯೇ ಪಾದದಡಿಗೆ ಬರುತ್ತದೆ. ಅದೇ ಪ್ರಕಾರ ಇನ್ನೊಂದು ಹೆಜ್ಜೆ ಆಕಾಶಕ್ಕಿಟ್ಟಾಗ ಇಡೀ ಆಕಾಶ ಪಾದದಡಿ ಬರುತ್ತದೆ. ಇನ್ನೊಂದು ಹೆಜ್ಜೆಯಿಡಲು ಜಾಗವಿಲ್ಲದಾಗ ಬಲಿ ತನ್ನ ತಲೆ ಮೇಲೆಯೇ ಪಾದವಿಡುವಂತೆ ಕೇಳಿಕೊಳ್ಳುತ್ತಾನೆ. ಅದರಂತೆ ವಿಷ್ಣುವು ಬಲಿಯ ತಲೆ ಮೇಲೆ ಪಾದವಿಟ್ಟು ಆತನನ್ನು ಪಾತಾಳಕ್ಕೆ ನೂಕುತ್ತಾನೆ.

ಬಲೀಂದ್ರನ ಭಕ್ತಿ, ಸತ್ಯನಿಷ್ಠೆಗೆ ಒಲಿದ ವಿಷ್ಣುವು ಬಲಿ ಚಕ್ರವರ್ತಿಯಲ್ಲಿ ವರ ಕೇಳೆಂದಾಗ ಬಲಿಯು ತನಗೆ ತನ್ನ ಪ್ರಜೆಗಳನ್ನು ನೋಡುವ ಆಸೆಯಿದೆ ಎನ್ನುತ್ತಾನೆ. ಇದಕ್ಕೆ ಸಂತುಷ್ಟರಾದ ವಿಷ್ಣು, ವರ್ಷದಲ್ಲಿ 3 ದಿನ ಭೂಮಿಗೆ ಬಂದು ಪ್ರಜೆಗಳನ್ನು ನೋಡುವ ಅವಕಾಶ ನೀಡುತ್ತಾರೆ. ಅದರಂತೆ ದೀಪಾವಳಿಯ 3 ದಿನ ಬಲಿ ಚಕ್ರವರ್ತಿ ಭೂಮಿಗೆ ಮೇಲೆ ಬರುತ್ತಾನೆ ಎನ್ನುವ ನಂಬಿಕೆ ತುಳುನಾಡಿನ ಜನಮಾನಸದ್ದು.

Edited By : Nagesh Gaonkar
Kshetra Samachara

Kshetra Samachara

05/11/2021 06:54 pm

Cinque Terre

28.3 K

Cinque Terre

0

ಸಂಬಂಧಿತ ಸುದ್ದಿ