ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಮಾಜಕ್ಕೆ ಪುನೀತ್ ರಾಜ್ ಕುಮಾರ್ ಮಾನವೀಯ ಸೇವೆ ಅನನ್ಯ; ಪೇಜಾವರ ಶ್ರೀ

ಉಡುಪಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

"ಪುನೀತ್ ರಾಜಕುಮಾರ್ ಅಸು ನೀಗಿರುವ ವಿಚಾರ ಕೇಳಿ ತುಂಬಾ ದುಃಖವಾಗಿದೆ.ಕನ್ನಡ ನಾಡು-ನುಡಿಗೆ ಡಾ. ರಾಜ್ ಕುಟುಂಬದ ಸೇವೆ ಅಪಾರ.ಪುನೀತ್ ಕಲಾವಿದ ಮಾತ್ರವಲ್ಲ, ದೊಡ್ಡ ಸಮಾಜ ಸೇವಕರೂ ಹೌದು. ತಾನು ದುಡಿದ ಸಂಪತ್ತನ್ನು ಸಮಾಜದ ಕಲ್ಯಾಣಕ್ಕೆ ವಿನಿಯೋಗಿಸುತ್ತಿದ್ದರು.ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ಅಗಲುವಿಕೆಯ ನೋವು ಸಹಿಸುವ ಶಕ್ತಿ ದೇವರು ನೀಡಲಿ. ಪುನೀತ್ ಅಭಿಮಾನಿಗಳು ಯಾರೂ ಅತಿರೇಕದ ವರ್ತನೆ, ಆತ್ಮಹತ್ಯೆಗೆ ಮುಂದಾಗದಿರಿ ಎಂದು

ಪೇಜಾವರ ಶ್ರೀ ಕಿವಿಮಾತು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/10/2021 06:35 pm

Cinque Terre

21.03 K

Cinque Terre

2

ಸಂಬಂಧಿತ ಸುದ್ದಿ