ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಆರ್.ಎಸ್.ಎಸ್ ನಿಂದ ವಿಜಯದಶಮಿ ಪಥಸಂಚಲನ....

ವಿಜಯದಶಮಿ ಪ್ರಯುಕ್ತ ಆರ್.ಎಸ್.ಎಸ್ ಪಥಸಂಚಲನ ಪುತ್ತೂರಿನಲ್ಲಿ ಪಥಸಂಚಲನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಈ ಪಥಸಂಚಲನ ಸರಕಾರಿ ಬಸ್ ನಿಲ್ದಾಣದ ಮೂಲಕ ಆರ್.ಎಸ್.ಎಸ್ ಮುಖ್ಯ ಶಾಖೆ ಪಂಚವಟಿತನಕ ಸಾಗಿತು.

ಆರ್.ಎಸ್.ಎಸ್ ಸಮವಸ್ತ್ರ ಧರಿಸಿ ಪಥಸಂಚಲನದಲ್ಲಿ ಭಾಗಿಯಾದ ನೂರಾರು ಸ್ವಯಂಸೇವಕರು ಈ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಪಥಸಂಚಲನದಲ್ಲಿ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶಾಸಕರಾದ ಹರೀಶ್ ಪೂಂಜಾ, ಸಂಜೀವ ಮಠಂದೂರು, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಲವರು ಪಥಸಂಚಲನದಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಯಂಸೇವಕರಿಗೆ ಸ್ಪೂರ್ತಿ ತುಂಬಿದರು. ಇದೇ ಸಂದರ್ಭದಲ್ಲಿ ಆರ್.ಎಸ್.ಎಸ್ ನ ಪುತ್ತೂರಿನ ಶಾಖಾ ಕೇಂದ್ರಕ್ಕೆ ನೂತನ ಕಟ್ಟಡದ ಶಿಲಾನ್ಯಾಸವನ್ನೂ ನೆರವೇರಿಸಲಾಯಿತು.

Edited By : Shivu K
Kshetra Samachara

Kshetra Samachara

15/10/2021 12:58 pm

Cinque Terre

4.26 K

Cinque Terre

2

ಸಂಬಂಧಿತ ಸುದ್ದಿ