ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನವರಾತ್ರಿ ಹಿನ್ನೆಲೆ; ಅಷ್ಟ ರೂಪಾಲಂಕಾರಗಳಲ್ಲಿ ಶ್ರೀಕೃಷ್ಣ ವಿರಾಜಮಾನ...

ಉಡುಪಿ: ಉಡುಪಿಯ ಶ್ರೀಕೃಷ್ಣ ದೇವರು ಅಲಂಕಾರ ಪ್ರಿಯ. ಬಹುತೇಕ ದೇವಾಲಯಗಳಲ್ಲಿ ಪ್ರತಿದಿನ ಏಕರೂಪದ ಅಲಂಕಾರ ನಡೆದರೆ, ಉಡುಪಿಯ ಕೃಷ್ಣನಿಗೆ ವೈವಿಧ್ಯಮಯ ಅಲಂಕಾರ ನಡೆಸಲಾಗುತ್ತದೆ. ಅದರಲ್ಲೂ ನವರಾತ್ರಿ ಹಬ್ಬ ಬಂತೆಂದರೆ, ಉಡುಪಿಯ ಕೃಷ್ಣ ಸ್ತ್ರೀ ರೂಪಿಯಾಗಿ ಬಿಡುತ್ತಾನೆ. ದಿನಂಪ್ರತಿ ನಾನಾ ದೇವಿಯರ ಅಲಂಕಾರವನ್ನು ಕೃಷ್ಣ ದೇವರಿಗೆ ಮಾಡುತ್ತಾರೆ.

ಸ್ವತಃ ಮಠಾಧೀಶರೇ ಈ ಅಲಂಕಾರ ಮಾಡುವುದರಿಂದ ವಿಶೇಷ ಮೆರುಗು ಮೂಡುತ್ತದೆ. ಸದ್ಯ ಅದಮಾರು ಮಠದ ಪರ್ಯಾಯೋತ್ಸವ ನಡೆಯುತ್ತಿದೆ. ಈ ಬಾರಿ ನವರಾತ್ರಿಯ 8 ದಿನಗಳ ಕಾಲ ನಾನಾ ದೇವಿಯರ ಅಲಂಕಾರದಿಂದ ಕೃಷ್ಣ ದೇವರನ್ನು ಪೂಜಿಸಲಾಗಿದೆ. ಗಜಲಕ್ಷ್ಮೀ,ಮೋಹಿನಿ, ರುಕ್ಮಿಣಿ, ಲಕ್ಷ್ಮಿ, ಚಪ್ಪರ ಮಂಚದಲ್ಲಿ ರುಕ್ಮಿಣಿ,ರುಕ್ಮಿಣಿ ಪ್ರೇಮ,ಮಹಿಷಾಸುರ ಮರ್ಧಿನಿ,ಶಾರದೆ ...ಹೀಗೆ ಎಂಟು ಅವತಾರಗಳಲ್ಲಿ ಕಡೆಗೋಲು ಕೃಷ್ಣ ಕಂಗೊಳಿಸಿದ್ದಾನೆ. ಇಷ್ಟು ಅಲಂಕಾರದಲ್ಲಿ ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥರ ಕೈಚಳಕ ಕಣ್ಮನ ಸೆಳೆದಿದೆ.ಕೇವಲ ನವರಾತ್ರಿ ಮಾತ್ರವಲ್ಲ, ವರ್ಷವಿಡೀ ಪ್ರತಿದಿನ ವಿವಿಧ ಅಲಂಕಾರಗಳಿಂದ ಶ್ರೀಕೃಷ್ಣ ದೇವರನ್ನು ಪೂಜಿಸಲಾಗುತ್ತದೆ.

Edited By : Manjunath H D
Kshetra Samachara

Kshetra Samachara

14/10/2021 07:34 pm

Cinque Terre

12.68 K

Cinque Terre

0

ಸಂಬಂಧಿತ ಸುದ್ದಿ