ಕಾಪು : ನವರಾತ್ರಿ ಮಹೋತ್ಸವದ ಪ್ರಯುಕ್ತ ಕಾಪು ಶ್ರೀ ಮೂರನೇ ಮಾರಿಗುಡಿಯಲ್ಲಿ ದೇವಸ್ಥಾನದ ತಂತ್ರಿಗಳಾದ ಶ್ರೀಶ ತಂತ್ರಿ ನೇತೃತ್ವದಲ್ಲಿ ಚಂಡಿಕಾಯಾಗದ ಪೂಜಾ ವಿಧಿ ವಿಧಾನಗಳು ನೆರವೇರಿದವು. ಚಂಡಿಕ ಯಾಗಕ್ಕೆ ಪಾಯಸ ರೇಷ್ಮೆ ಸೀರೆ, ರವಿಕೆ ಕಣ, ಕರಿಮಣಿ, ಕುಂಕುಮ, ಅರಸಿನ, ಬಳೆ ಸಹಿತವಾಗಿ ಹರಕೆ ರೂಪದಲ್ಲಿ ನೀಡಿದ ತೆಂಗಿನಕಾಯಿಯನ್ನು ಸಮರ್ಪಿಸಲಾಯಿತು
ಚಂಡಿಕಾಯಾಗ ಪೂರ್ಣಹುತಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.ನೂರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೇವರ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಸಂದರ್ಭ ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಕಾರ್ಯನಿರ್ವಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಮೋಹನ್ ಬಂಗೇರ, ಶ್ರೀಕರ್ ಶೆಟ್ಟಿ ಕಲ್ಯಾ, ಸಂದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/10/2021 06:08 pm