ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನವರಾತ್ರಿ ಹಿನ್ನೆಲೆ: ಉತ್ಸವಕ್ಕೆ ಸಜ್ಜುಗೊಂಡಿದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಕೊಲ್ಲೂರು: ಕರಾವಳಿಯಲ್ಲಿ ನವರಾತ್ರಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.ಉಡುಪಿ ಜಿಲ್ಲೆಯ ಪ್ರಸಿದ್ಧ ದೇವಿ ಶಕ್ತಿಕೇಂದ್ರವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಸಕಲ ಸಿದ್ದತೆಗಳೊಂದಿಗೆ ಹಬ್ಬಕ್ಕೆ ಸಜ್ಜುಗೊಂಡಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ನವರಾತ್ರಿ ಸಂದರ್ಭ ಸಾವಿರಾರು ಭಕ್ತರು ಆಗಮಿಸುತ್ತಾರೆ.ದೇವಳದಲ್ಲಿ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದ್ದು ಸಕಲ ಸಿದ್ಧತೆಗಳನ್ನು‌ ಮಾಡಿಕೊಳ್ಳಲಾಗಿದೆ.ಕೊನೆಯ ದಿನ ಮೂಕಾಂಬಿಕೆಗೆ ವಿಜಯದಶಮಿಯ ಸಂಭ್ರಮ ಇದ್ದು ಅಂದು ನಡೆಯುವ ಅಕ್ಷರಾಭ್ತಾಸಕ್ಕೆ ಬಹಳ ಮಹತ್ವವಿದೆ.

ಈ ಹಿನ್ನೆಲೆಯಲ್ಲಿ ವಿದ್ಯುತ್ ದೀಪ, ಪುಷ್ಪಗಳಿಂದ ಮೂಕಾಂಬಿಕಾ ದೇವಸ್ಥಾನವನ್ನು ಸಿಂಗರಿಸಲಾಗಿದೆ.ಇದೇ ವೇಳೆ ಕೋವಿಡ್ ಆತಂಕದ ಹಿನ್ನಲೆಯಲ್ಲಿ ಸಂಪ್ರದಾಯಗಳು ಚಾಚೂ ತಪ್ಪದೇ ನಡೆದರೂ,ಸರಳ ಆಚರಣೆಗೆ ಜಿಲ್ಲಾಡಳಿತ ಮಾರ್ಗಸೂಚಿ ಹೊರಡಿಸಿದೆ.

Edited By : Manjunath H D
Kshetra Samachara

Kshetra Samachara

07/10/2021 01:34 pm

Cinque Terre

8.2 K

Cinque Terre

0

ಸಂಬಂಧಿತ ಸುದ್ದಿ