ಉಡುಪಿ: ರಾಜ್ಯದಲ್ಲಿ ಮತಾಂತರ ಪ್ರಕ್ರಿಯೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ನಿರ್ಬಂಧ ಮಾಡಿ, ಮತಾಂತರ ಆಗುವುದನ್ನು ತಡೆಯಬೇಕು. ಇಲ್ಲದೇ ಇದ್ದರೆ ಸಮಾಜದಲ್ಲಿ ದೊಡ್ಡ ಅಶಾಂತಿ ಉಂಟಾಗಬಹುದು ಅಂತ ಪೇಜಾವರ ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮತಾಂತರ ವಿಚಾರವಾಗಿ ಮಾತನಾಡಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, ಒಂದು ಕಡೆ ಆಮಿಷವೊಡ್ಡಿ ಬಲಾತ್ಕಾರವಾಗಿ ಮತಾಂತರ ಮಾಡುತ್ತಿಲ್ಲ ಅಂತಾರೆ, ಮತ್ತೊಂದು ಕಡೆ ಮತಾಂತರ ಮಾಡುತ್ತಿದ್ದ ಮಿಷನರಿಗಳನ್ನು ಬಂಧಿಸಿದ್ದಾರೆ ಎನ್ನುವ ವರದಿಯಾಗಿದೆ. ಆದ್ದರಿಂದ ಮತಾಂತರ ಇನ್ನೂ ಮುಂದುವರಿದರೆ ಸಮಾಜದಲ್ಲಿ ದೊಡ್ಡ ಅಶಾಂತಿ, ಗೊಂದಲ ಉಂಟಾಗಬಹುದು. ಹೀಗಾಗಿ ಬಲವಾದ ಕಾನೂನು ಮೂಲಕ ಮತಾಂತರ ನಿರ್ಬಂಧ ಮಾಡಬೇಕು ಅಂತ ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ.
Kshetra Samachara
30/09/2021 01:11 pm