ಉಡುಪಿ: ಕೋವಿಡ್ ಕಾರಣದಿಂದ ವರ್ಷಕ್ಕೂ ಹೆಚ್ಚು ಕಾಲ ಕೃಷ್ಣಮಠದಲ್ಲಿ ಸ್ಥಗಿತವಾಗಿದ್ದ ಅನ್ನಪ್ರಸಾದ ವ್ಯವಸ್ಥೆ ಇಂದು ಮತ್ತೆ ಆರಂಭಗೊಂಡಿದೆ.ಮೊದಲ ದಿನವಾದ ಇಂದು ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು.
ಕೃಷ್ಣಮಠದಲ್ಲಿ ಭಕ್ತರಿಗೆ ಬಡಿಸುವ ಅನ್ನಪ್ರಸಾದಕ್ಕೆ ಬಹಳ ಮಹತ್ವವಿದೆ.ತಮ್ಮ ಪರ್ಯಾಯದ ಅವಧಿಯಲ್ಲಿ ಎಲ್ಲ ಭಕ್ತರಿಗೂ ಯಥೇಚ್ಛ ಅನ್ನಪ್ರಸಾದ ಸಿಗಬೇಕು ಎಂಬುದು ಅಷ್ಠಮಠಾಧೀಶರುಗಳ ಕನಸು.ಆದರೆ ಈ ಬಾರಿಯ ಪರ್ಯಾಯದ ಪ್ರಾರಂಭದಲ್ಲೇ ಕೊರೋನಾ ಮಹಾಮಾರಿ ಅಪ್ಪಳಿಸಿತು.ಇದರ ಪರಿಣಾಮವಾಗಿ ಸ್ಥಗಿತಗೊಂಡಿದ್ದ ಅನ್ನಪ್ರಸಾದ ಇವತ್ತಿನಿಂದ ಮತ್ತೆ ಆರಂಭಗೊಂಡಿದೆ.
ಸದ್ಯ ರಾಜ್ಯದಲ್ಲಿ ಕೊರೋನಾ ಹಾವಳಿ ಗಣನೀಯವಾಗಿ ಕಡಿಮೆಯಾಗಿದ್ದು ಕೃಷ್ಣಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.ಪ್ರತಿನಿತ್ಯ ಮಠಕ್ಕೆ ಭೇಟಿ ನೀಡುವ ಸಾವಿರಾರು ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ನಡೆಯುವ ಭೋಜನದ ವ್ಯವಸ್ಥೆಯಿಂದ ದೂರದೂರುಗಳಿಂದ ಬರುವ ಭಕ್ತರಿಗೂ ಬಹಳ ಅನುಕೂಲವಾಗುತ್ತಿದೆ.
ಇದೀಗ ಮತ್ತೆ ಅನ್ನಪ್ರಸಾದದ ವ್ಯವಸ್ಥೆ ಮಾಡಿರುವುದರಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ. ಭೋಜನ ವ್ಯವಸ್ಥೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪರ್ಯಾಯ ಮಠದಿಂದ ಮಾಡಿಕೊಳ್ಳಲಾಗಿದೆ.
Kshetra Samachara
22/09/2021 03:30 pm