ಮಂಗಳೂರು: ಈ ಕುಟುಂಬದ ಹಿರಿಯರಾದ ಮೋಹನ್ ರಾವ್ ಅವರು 92 ವರ್ಷಗಳ ಹಿಂದೆ ಗಣೇಶನ ಮೂರ್ತಿ ತಯಾರು ಮಾಡಲು ಆರಂಭಿಸಿದ್ದಾರೆ. ಆ ಬಳಿಕ ಅವರ ನಾಲ್ವರು ಪುತ್ರರು ಈ ಕಾರ್ಯವನ್ನು ಮುಂದುವರಿಸಿದ್ದಾರೆ. ಇದೀಗ ಈ ನಾಲ್ವರ ಮಕ್ಕಳು, ಮೊಮ್ಮಕ್ಕಳು ಇದರಲ್ಲಿ ಕೈಜೋಡಿಸಿದ್ದಾರೆ. ಕೊರೊನಾ ಸಂಕಷ್ಟದ ಈ ದಿನದಲ್ಲಿಯೂ ಅವರಿಗೆ ಈ ಬಾರಿ 230 ಗಣೇಶನ ಮೂರ್ತಿ ತಯಾರಿಕೆಗೆ ಆರ್ಡರ್ ಬಂದಿದೆಯಂತೆ.
ಅದರಲ್ಲಿ ಯಾವತ್ತಿನಂತೆ ಅಮೆರಿಕೆಯ ಮೂರ್ತಿ ಇತ್ತಂತೆ. ಈ ಮೂರ್ತಿಯೂ ಅಮೇರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನ ಪ್ರಸನ್ನ ಗಣಪತಿ ದೇಗುಲದ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಆರಾಧನೆಗೊಳ್ಳಲಿದೆಯಂತೆ. ಈ ಮೂರ್ತಿ ಜುಲೈ 30ರಂದೇ ಅಮೇರಿಕಾಕ್ಕೆ ರವಾನೆಯಾಗಿದೆಯಂತೆ. ಅಲ್ಲದೆ ಇವರ ಮೂರ್ತಿಗೆ ಹೊರ ರಾಜ್ಯದ ಕಾಸರಗೋಡಿನಲ್ಲಿಯೂ ಬೇಡಿಕೆಯಿದೆಯಂತೆ.
ಕಳೆದ 92 ವರ್ಷಗಳಿಂದಲೂ ಇವರು ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನೇ ತಯಾರು ಮಾಡುತ್ತಿದ್ದು, 5-6 ಅಡಿ ಎತ್ತರದ ಮೂರ್ತಿಯಿಂದ ತೊಡಗಿ ಒಂದು ಅಡಿ ಎತ್ತರದ ಮೂರ್ತಿಯನ್ನು ರಚಿಸುತ್ತಾರಂತೆ. ಭಕ್ತಾದಿಗಳ ಬೇಡಿಕೆಗಳಿಗೆ ತಕ್ಕಂತೆ ವೈವಿಧ್ಯ ರೂಪದ ಗಣೇಶನ ಮೂರ್ತಿಯನ್ನು ಇವರು ತಯಾರು ಮಾಡುತ್ತಾರಂತೆ. ಹಿರಿಯರಿಂದ ತೊಡಗಿ ಕಿರಿಯರು ಸೇರಿ 15 ಮಂದಿಯಷ್ಟು ಮಂದಿ ಒಂದೇ ಕುಟುಂಬದವರೇ ಈ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರಂತೆ.
Kshetra Samachara
09/09/2021 08:51 pm