ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಗಣೇಶೋತ್ಸವಕ್ಕೆ ಭರದ ಸಿದ್ಧತೆ ,ಭರ್ಜರಿ ವ್ಯಾಪಾರ, ಸಂಭ್ರಮದ ಗೌರಿ ಹಬ್ಬ

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಪೂರ್ವಭಾವಿಯಾಗಿ ಗುರುವಾರ ಗೌರಿಹಬ್ಬ ಸಂಭ್ರಮದಿಂದ ನಡೆದಿದೆ. ಜಿಲ್ಲಾಡಳಿತ ಆದೇಶದಂತೆ ಕೊರೊನಾ ಎಚ್ಚರಿಕೆಗಳ ನಡುವೆ ಮೂಲ್ಕಿ, ಕಾರ್ನಾಡು, ಕಿನ್ನಿಗೋಳಿ ,ಪಕ್ಷಿಕೆರೆ, ಹಳೆಯಂಗಡಿ, ಬಳಕುಂಜೆ ಅತಿಕಾರಿಬೆಟ್ಟು ಸಹಿತ ವಿವಿಧ ಕಡೆಗಳಲ್ಲಿ ಹೂವು ಹಣ್ಣು ಹಂಪಲು,ಕಬ್ಬಿನ ವ್ಯಾಪಾರ ಬಲು ಜೋರಾಗಿದ್ದು ವಿವಿಧ ಸಂಘಟನೆಗಳು ಗಣೇಶೋತ್ಸವಕ್ಕೆ ಅಣಿಯಾಗಿದೆ.

ಮುಲ್ಕಿ ಪರಿಸರದಲ್ಲಿ ವಿವಿಧಡೆ ಕಬ್ಬಿನ ಬೆಲೆ ಡಝನ್ ಗೆ 400 ರೂನಂತೆ ಬಿಕರಿಯಾಗುತ್ತಿದ್ದು ಚೌಕಾಸಿ ನಡೆಯುತ್ತಿರುವುದು ಕಾಣುತ್ತಿದೆ.

ಮುಲ್ಕಿಯ ಕಾರ್ನಾಡು ನಲ್ಲಿ ಕಳೆದ 50 ವರ್ಷಗಳಿಂದ ಗಣೇಶೋತ್ಸವದ ಸಂದರ್ಭ ಕಬ್ಬಿನ ವ್ಯಾಪಾರ ಮಾಡುತ್ತಿರುವ ಶೇಕ್ ಅಹಮದ್ ಪ್ರಕಾರ ಈ ಬಾರಿ ಮೂರರಿಂದ ನಾಲ್ಕು ಸಾವಿರದವರೆಗೆ ತಂದಿದ್ದ ಕಬ್ಬು ವ್ಯಾಪಾರ ನಡೆಯುತ್ತಿದೆ. ಕಳೆದ ವರ್ಷದ ಕೊರೊನಾ ದಿನಗಳಲ್ಲಿಯೂ ಯಾವುದೇ ಕಬ್ಬಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿಲ್ಲ ಎಂದು ಹೇಳಿದ್ದಾರೆ.

ಗಣೇಶ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದ್ದು ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.

Edited By : Shivu K
Kshetra Samachara

Kshetra Samachara

09/09/2021 06:24 pm

Cinque Terre

32.05 K

Cinque Terre

1

ಸಂಬಂಧಿತ ಸುದ್ದಿ