ಮಂಗಳೂರು:ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನ ನಂಬರ್ ಪ್ಲೇಟ್ ನಲ್ಲಿರುವ ಸ್ಟಿಕ್ಕರ್ ತೆರವುಗೊಳಿಸುವಂತೆ ಪೊಲೀಸರು ಸೂಚಿಸಿದ್ದು.
ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟಿನಲ್ಲಿ ನಡೆದಿದೆ. ಬಬೀಶ್ ಪೂಜಾರಿ ಎಂಬುವವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಡೆ ಹೈವೇ ಪ್ರೆಟ್ರೊಲಿಂಗ್ ವಾಹನದಲ್ಲಿದ್ದ ಎ ಎಸ್ ಐ ರಾಬಟ್೯ ಲಾಸ್ರಾದೊ ಹಾಗೂ ಸಿಬ್ಬಂದಿಗಳು ಮಾರುತಿ ಕಾರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.ದಾಖಲೆಗಳು ಸರಿಯಾಗಿದ್ದು ಕಾರಿನ ಮುಂಭಾಗ ಹಾಗೂ ಹಿಂದೆ ಅಂಟಿಸಲಾಗಿದ್ದ ದೈವ ,ದೇವರ ಭಾವಚಿತ್ರವಿರು ಸ್ಟಿಕ್ಕರ್ ಗಳನ್ನು ಕಳಚುವಂತೆ ಹೇಳಿದ್ದಾರೆ,ತಪ್ಪಿದ್ರೆ ಅದಕ್ಕೆ ದಂಡ ವಿಧಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಇದರಿಂದ ಕುಪಿತಗೊಂಡ ಕಾರಿನ ಮಾಲೀಕ ಬಬೀಶ್ ಪೂಜಾರಿ ಅವರು ಹಿಂದೂ ಸಂಘಟನೆಯ ಪ್ರಮುಖರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಹಿಂದೂ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಎ ಎಸ್ ಐ ರಾಬಟ್೯ ಲಾಸ್ರಾದೊ ಅವರ ಕೆಲಸಕ್ಕೆ ಅಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದ್ದಾರೆ.ಕರ್ತವ್ಯದಲ್ಲಿ ಕೋಮುಭಾವನೆ ತೋರಿಸಿದ ಲಸ್ರಾದೊ ಅವರಂತಹ ಅಧಿಕಾರದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
Kshetra Samachara
31/08/2021 04:38 pm