ಉಡುಪಿ: ಈ ಬಾರಿ ಕೋವಿಡ್ ನಿಂದಾಗಿ ಉಡುಪಿಯ ಶ್ರೀಕೃಷ್ಣಮಠದಲ್ಲಿ ಸರಳ ಕೃಷ್ಣ ಜನ್ಮಾಷ್ಠಮಿ ಸಂಪನ್ನಗೊಂಡಿತು. ಭಕ್ತರಿಗೆ ಕೃಷ್ಣ ದೇವರ ದರ್ಶನ ಕೈಗೊಳ್ಳಲು ಅವಕಾಶ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಬಂದು ದೇವರ ದರ್ಶನ ಮಾಡಬಹುದು. ಆದರೆ ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ವಾಮೀಜಿಗಳು ಮತ್ತು ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿದೆ.
ಇಂದು ಹಗಲಿಡಿ ಕೃಷ್ಣ ಭಕ್ತರು ಉಪವಾಸವಿರಲಿದ್ದಾರೆ. ಇನ್ನೊಂದೆಡೆ ಮಠದಲ್ಲಿ ನಿರಂತರ ಭಜನೆ ನಡೆಯುತ್ತಿದೆ. ಮಧ್ಯರಾತ್ರಿ ಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ.ರಾತ್ರಿ 12.30 ರ ನಂತರ ಚಂದ್ರಶಾಲೆ, ಮಧ್ವ ಮಂಟಪ ಮತ್ತು ಕನಕಗೋಪುರ ಬಳಿ ಅರ್ಘ್ಯ ಪ್ರಧಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಥಬೀದಿಯಲ್ಲಿ ಭಕ್ತರು ಹೂವು ಹಣ್ಣು ಖರೀದಿಸುವ ದೃಶ್ಯ ಬೆಳಿಗ್ಗಿನಿಂದಲೇ ಸಾಮಾನ್ಯವಾಗಿದೆ.
Kshetra Samachara
30/08/2021 01:22 pm