ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಕ್ಕೆ: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಸಂಭ್ರಮ

ಸುಬ್ರಹ್ಮಣ್ಯ: ನಾಗರ ಪಂಚಮಿ ಹಬ್ಬವು ಭಾರತದ ಹಲವಾರು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹಿಂದೂಗಳು ಆಚರಿಸುವ ಒಂದು ವಿಶೇಷ ಹಬ್ಬ.

ನಾಗರ ಪಂಚಮಿಯನ್ನು ಸಾಮಾನ್ಯವಾಗಿ ಶ್ರಾವಣ ಮಾಸದ ಶುಕ್ಲಪಕ್ಷ ದ ಪಂಚಮಿಯಂದು ಆಚರಿಸಲಾಗುತ್ತದೆ. ನಾಗರ ಪಂಚಮಿ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ,ಅಣ್ಣ ತಂಗಿಯರ ಹಬ್ಬ ಎಂದೂ ಕರೆಯಲಾಗುತ್ತದೆ. ನಾಗರ ಪಂಚಮಿಯಂದು ವಿಶೇಷವಾಗಿ ನಾಗ ದೇವರನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ವಿಶೇಷವಾಗಿ ಎಲ್ಲಾ ನಾಗಕ್ಷೇತ್ರ ದೇವಸ್ಥಾನಗಳಲ್ಲಿ ನಾಗಬನಗಳಲ್ಲಿ ಹಾಗೂ ಪೂರ್ವಜರಿಂದ ಪೂಜಿಸಲಾಗುವ ಹುತ್ತಗಳಿಗಳಿರುವ ಪ್ರದೇಶಗಳಿಗೆ ಭೇಟಿ ನೀಡುವ ಭಕ್ತರು ಎಲ್ಲಾ ರೀತಿಯ ನಾಗದೋಷಗಳಿಂದ ತಮ್ಮನ್ನು ಹಾಗೂ ತಮ್ಮ ಸಾಕುಪ್ರಾಣಿ, ವಸ್ತುಗಳನ್ನು ರಕ್ಷಿಸಲೆಂದು ಬೇಡಿಕೊಂಡು ಹಾಲು,ಹಣ್ಣುಹಂಪಲುಗಳು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದವಾದ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶ್ವ ಪ್ರಸಿದ್ಧವಾಗಿರುವ ನಾಗಕ್ಷೇತ್ರವಿದೆ.ಸರ್ವ ಸರ್ಪ ದೋಷ ನಿವಾರಣೆಗಾಗಿ ಈ ದೇವಸ್ಥಾನದಲ್ಲಿ ನಡೆಸುವ ಪೂಜೆಗಳು ಬಹಳ ಪ್ರಾಮುಖ್ಯತೆ ಪಡೆದಿದೆ. ದಿನಂಪ್ರತಿ ಸಾವಿರಾರು ಭಕ್ತರು ಸರ್ಪ ದೋಷಗಳಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಯನ್ನು, ಸರ್ಪಸಂಸ್ಕಾರ ಕ್ರಿಯೆಗಳನ್ನು ಮಾಡಿಸುತ್ತಾರೆ. ಕುಮಾರ ಪರ್ವತದ ತಪ್ಪಲಿನಲ್ಲಿ ಮತ್ತು ಕುಮಾರಧಾರ ನದಿ ತಡದಲ್ಲಿ ಬರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೇವರ ಜೊತೆಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ ನಾಗ ಇಲ್ಲಿನ ವಿಶೇಷ. ವಾಸುಕಿ ಮತ್ತು ಇತರ ಹಾವುಗಳು ಸುಬ್ರಹ್ಮಣ್ಯದ ಗುಹೆಗಳಲ್ಲಿ ಆಶ್ರಯ ಪಡೆದಿವೆ ಎಂಬ ಪೌರಾಣಿಕ ನಂಬಿಕೆಯೂ ಇಲ್ಲಿದೆ.ಇದಕ್ಕೆ ಸಾಕ್ಷಿಯೆಂಬತೇ ಕಾಶಿಕಟ್ಟೆ ಸಮೀಪ ನಾಗರಾಜ ವಾಸುಕಿ ತಪಸ್ಸು ನಿರತವಾದ ಬಿಲದ್ವಾರ ನಮಗೆ ಕಾಣಸಿಗುತ್ತದೆ. ಈ ದೇವಸ್ಥಾನಕ್ಕೆ ಬರೇ ಭೇಟಿ ನೀಡಿದರೂ ಸರ್ಪ ದೋಷಗಳು ನಿವಾರಣೆ ಆಗುತ್ತದೆ ಎಂಬುದು ಐತಿಹ್ಯ.ಕೊರೊನಾ ಹಿನ್ನೆಲೆಯಲ್ಲಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದ್ದರೂ ಭಕ್ತರು ಶ್ರದ್ದಾಭಕ್ತಿಯಿಂದ ಪೂಜೆಗಳಲ್ಲಿ ಭಾಗವಹಿಸುವ ದೃಶ್ಯಗಳು ಕಂಡುಬಂದಿದೆ.

Edited By : Manjunath H D
Kshetra Samachara

Kshetra Samachara

13/08/2021 07:46 pm

Cinque Terre

18.85 K

Cinque Terre

0

ಸಂಬಂಧಿತ ಸುದ್ದಿ