ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಣ್ಮನ ಸೆಳೆದ ಹೆಜಮಾಡಿ ನಡಿಕುದ್ರು ಶ್ರೀ ಜಾರಂದಾಯ ನೇಮ; ಜನಭಕ್ತಿ- ದೈವ ಶಕ್ತಿಯ ಸಮಾಗಮ

ಮುಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಹೆಜಮಾಡಿ ನಡಿಕುದ್ರು ಧರ್ಮದೈವ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಶ್ರೀ ಜಾರಂದಾಯ ಯುವಕ ವೃಂದದ 43ನೇ ಭಜನಾ ಮಂಗಲೋತ್ಸವ ಹಾಗೂ ಶ್ರೀ ಧರ್ಮದೈವದ ನೇಮೋತ್ಸವ ಭಕ್ತಿ ಸಂಭ್ರಮದಿಂದ ಜರುಗಿತು.

ಫೆ.20ರಂದು ಶ್ರೀ ಕ್ಷೇತ್ರ ಬಪ್ಪನಾಡಿನ ಅರ್ಚಕ ಬಿ. ಕೃಷ್ಣದಾಸ ಭಟ್ ಉಪಸ್ಥಿತಿಯಲ್ಲಿ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಿತು.

ಅದೇ ದಿನ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ 43ನೇ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು.

ಫೆ. 24ರಂದು ಬೆಳಗ್ಗೆ ನಾಗದೇವರಿಗೆ ಹಾಲು ಅಭಿಷೇಕ, ಶ್ರೀ ಜಾರಂದಾಯ ದರ್ಶನ ಪಾತ್ರಿ ಹೆಜಮಾಡಿ ದಿ. ಚೆನ್ನಪ್ಪ ಪೂಜಾರಿ ಹಾಗೂ ನಡಿಕುದ್ರು ಸಾನದ ಮನೆ ದಿ. ಕಮಲ ಕೃಷ್ಣಪ್ಪ ಅಂಚನ್ ಸ್ಮರಣಾರ್ಥ ಕುಟುಂಬಿಕರು ಹಾಗೂ ವಿದ್ಯಾನಿಧಿ ದಾನಿಗಳ ನೆರವಿನಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು. ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

ಸಂಜೆ ಭಂಡಾರ ಇಳಿದು ಮೈಸಂದಾಯ ನೇಮ, ಬಳಿಕ ಶ್ರೀ ಜಾರಂದಾಯ- ಬಂಟ ಪರಿವಾರ ದೈವಗಳ ಅಂಗಣ ನೇಮೋತ್ಸವ ನಡೆಯಿತು.

ಈ ಸಂದರ್ಭ ದೈವಸ್ಥಾನ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ವಿ. ಕೋಟ್ಯಾನ್ ಮಾತನಾಡಿ, ದೈವಸ್ಥಾನದಲ್ಲಿ ಪ್ರತಿ ಶನಿವಾರ ಭಜನಾ ಸೇವೆ, ಪಂಚಕಜ್ಜಾಯ- ತಂಬಿಲ ಸೇವೆ ಹಾಗೂ ಇನ್ನಿತರ ಸೇವೆಗಳನ್ನು ಭಕ್ತಾದಿಗಳಿಂದ ಸ್ವೀಕರಿಸಲಾಗುವುದು. ಕಳೆದ ವರ್ಷ ಭಜನಾ ಮಂಗಲೋತ್ಸವ, ನೇಮೋತ್ಸವ ಹಾಗೂ ಪ್ರತಿ ಶನಿವಾರ ಭಜನಾ ಸೇವೆ, ಅನ್ನ ಪ್ರಸಾದ ಸೇವೆ, ಸಂಕ್ರಮಣದಂದು ಪಂಚಕಜ್ಜಾಯ- ತಂಬಿಲ ಸೇವೆ, ನೂತನ ಗೋಪುರಕ್ಕೆ ಸ್ಥಳದಾನ- ಧನಸಹಾಯ, ಮೇಲ್ ಚಪ್ಪರ ವಿಸ್ತರಣೆ ಹಾಗೂ ಎಲ್ಲ ವಿಧದಲ್ಲಿ ಸಹಕರಿಸಿದ ದಾನಿಗಳಿಗೆ, ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

25/02/2021 09:07 am

Cinque Terre

9.81 K

Cinque Terre

0

ಸಂಬಂಧಿತ ಸುದ್ದಿ