ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡ್ಕೂರು :ಸಂಭ್ರಮದ ಬ್ರಹ್ಮರಥೋತ್ಸವ.

ಮುಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಸಂಭ್ರಮದಿಂದ ನಡೆಯಿತು. ರಥೋತ್ಸವದ ದಿನ ಮುಂಜಾನೆಯಿಂದಲೇ ಭಕ್ತರು ದೇವಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಧನ್ಯರಾದರು. ಕೊರೋನಾ ಮಹಾಮಾರಿಯ ಬಳಿಕ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಅನ್ನದಾನ ಸ್ವೀಕರಿಸಿ ಕೃತಾರ್ಥರಾದರು.

ರಾತ್ರಿ ಬ್ರಹ್ಮರಥದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೂವಿನ ಪೂಜೆಯ ಬಳಿಕ ಬ್ರಹ್ಮರಥೋತ್ಸವ, ಭೂತಬಲಿ ಕವಾಟ ಬಂಧನ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಫೆ.11ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬ್ರಹ್ಮರಥೋತ್ಸವ ದಿನದಂದು ದೇವಳದ ಬಾರ್ಗವ ಮಂಟಪದಲ್ಲಿ ವಿದ್ವಾನ್ ಸುಬ್ರಹ್ಮಣ್ಯ ನಾವಡ ಶಿಷ್ಯವೃಂದ ದಿಂದ ಭರತನಾಟ್ಯ ಪ್ರದರ್ಶನ, ರಾತ್ರಿ ರಥೋತ್ಸವ ಸಂದರ್ಭದಲ್ಲಿ ಕೀಲುಕುದುರೆ ನೃತ್ಯ, ಚಂಡೆವಾದನ ಮತ್ತು ಶ್ರೀ ದುರ್ಗಾ ಬ್ಯಾಂಡ್ ವಾದನ ಬಳಗದವರಿಂದ ಗಮನ ಸೆಳೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಎಚ್.ಶೆಟ್ಟಿ, ಮಾತನಾಡಿ ಕೊರೋನಾ ಸುರಕ್ಷತಾ ಕ್ರಮಗಳೊಂದಿಗೆ ಈ ಬಾರಿ ರಥೋತ್ಸವ ವಿಜ್ರಂಭಣೆಯಿಂದ ನಡೆದಿದ್ದು ಭಕ್ತಾದಿಗಳು ಸಹಕಾರ ನೀಡಿದ್ದಾರೆ ಎಂದರು.

ಫೆ.19ರಂದು ಶ್ರೀದೇವರ ಅವಭೃತೋತ್ಸವ ನಡೆಯಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಅದೇ ದಿನ ಶುಕ್ರವಾರ ಬೆಂಗಳೂರು ಈಶ್ವರೀ ಕಲಾಸಂಗಮ ರವರಿಂದ "ಭಕ್ತ ಸುಧನ್ವ"ತೆಂಕು ಬಡಗು ತಿಟ್ಟು ಕೂಡುವಿಕೆಯ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಸಂಗೀತಗಾನ ಸಂಭ್ರಮ,ಫೆ. 20 ಶನಿವಾರ ಮುಂಡ್ಕೂರು ಕುಸಲ್ದ ಕಲಾವಿದರು ಅವರಿಂದ "ಕಾರ್ಣಿಕ ಉಂಡಾ !"ತುಳು ಸಾಮಾಜಿಕ ನಾಟಕ, ಫೆ. 21 ಭಾನುವಾರ ಕರಾವಳಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಪ್ರಾಯೋಜಕತ್ವದಲ್ಲಿ "ಶಮಂತಕ ರತ್ನ"ಯಕ್ಷಗಾನ ಬಯಲಾಟ ನಡೆಯಲಿದೆ.ಎಂದರು

ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಎಸ್ ವಿ, ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ರಾಮದಾಸ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಈ ನಡುವೆ ದೇವಳದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅನ್ನದಾನದ ಪಂಕ್ತಿಭೇದ ನಡೆದ ಬಗ್ಗೆ ಭಕ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನದಾನದ ಸಂದರ್ಭ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸದೆ ಗುಂಪುಗುಂಪಾಗಿ ಸೇರಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ಭಕ್ತರು ಮುಜರಾಯಿ ಇಲಾಖೆಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Edited By : Manjunath H D
Kshetra Samachara

Kshetra Samachara

19/02/2021 10:59 am

Cinque Terre

13.58 K

Cinque Terre

0

ಸಂಬಂಧಿತ ಸುದ್ದಿ