ಕಾಪು: "ಸ್ವಾತಂತ್ರ್ಯದ ಕಾವಲುಗಳಾಗಿರಿ" ಎಂಬ ಧ್ಯೇಯ ವಾಕ್ಯದೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸಂಸ್ಥಾಪನಾ ದಿನವನ್ನು ದೇಶಾದ್ಯಂತ ಇಂದು ಆಚರಿಸಲಾಗುತ್ತಿದ್ದು, ಇಂದು ಉಚ್ಚಿಲದಲ್ಲಿಯೂ ಸಂಸ್ಥಾಪನಾ ದಿನ ಆಚರಿಸಲಾಯಿತು.
ಪಿಎಫ್ಐ ಉಚ್ಚಿಲ ವಲಯ ಅಧ್ಯಕ್ಷ ಇಬ್ರಾಹಿಂ ಪಲಿಮಾರ್ ದ್ವಜಾರೋಹಣ ನೆರವೇರಿಸಿದರು.ಈ ಸಂದರ್ಭಮುಖ್ಯ ಅತಿಥಿಯಾಗಿದ್ದ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಮಜೀದ್ ಪೊಲ್ಯ ಮಾತನಾಡಿ, ದೇಶದ ಸಾಮಾಜಿಕ ವ್ಯವಸ್ಥೆ ನಾಶಗೊಳಿಸಲು ಹೊರಟಿರುವ ಹಿಂದುತ್ವ ಅಜೆಂಡಾವನ್ನು ಹೇರಲು ಫ್ಯಾಸಿಸ್ಟ್ ಶಕ್ತಿಗಳು ಶ್ರಮಿಸುತ್ತಿದೆ.
ಇಂತಹ ಸಮಯದಲ್ಲಿ ಇದಕ್ಕೆ ವಿರುದ್ಧವಾಗಿ ಕರ್ನಾಟಕದ ಕೆ ಎಫ್ ಡಿ, ಕೇರಳದ ಎನ್ ಡಿ ಎಫ್, ತಮಿಳುನಾಡಿನ ಎಂ.ಎನ್.ಪಿ. ಸೇರಿದಂತೆ ಮೂರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳು ಫೆ.17/ 2007 ರಂದು ಪಿಎಫ್ಐ ಎಂಬ ಹೆಸರಿನ ಒಂದೇ ವೇದಿಕೆಯಡಿ ದೇಶದ ನಾನಾ ರಾಜ್ಯಗಳಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದು, ಸಂಸ್ಥಾಪನಾ ದಿನವಾಗಿ ದೇಶಾದ್ಯಂತ ಇಂದು ಪಿಎಫ್ಐ ಡೇ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟ ಪ್ರಜ್ಞಾವಂತ ನಾಗರಿಕರೆಲ್ಲರೂ ಸಂವಿಧಾನದ ರಕ್ಷಣೆಗಾಗಿ ಪಿಎಫ್ಐ ಜೊತೆ ಕೈ ಜೋಡಿಸಬೇಕೆಂದರು.
ಎಸ್ಡಿಪಿಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ರಾರ್ ಉಚ್ಚಿಲ ಮಾತನಾಡಿದರು.ಎಸ್ಡಿಪಿಐ ಪಂಚಾಯಿತಿ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ಉಚ್ಚಿಲ,ವೈವಾ ಎರ್ಮಾಳ್ ಅಧ್ಯಕ್ಷ ಇಬ್ರಾಹಿಂ ಅರ್ಶ್,ಅಲ್ ಇಸ್ಲಾಮಿಯಾ ಯಂಗ್ ಮೆನ್ಸ್ ಅಧ್ಯಕ್ಷ ಅಸಾಸುದ್ದೀನ್, ತವಕ್ಕಲ್ ಯಂಗ್ ಮೆನ್ಸ್ ಅಧ್ಯಕ್ಷ ಅಬ್ದುಲ್ ರಝಾಕ್ ಮೋನಬ್ಬ, ಹೆಲ್ಪಿಂಗ್ ಹ್ಯಾಂಡ್ ಅಧ್ಯಕ್ಷ ಝೀಯಾಹುರ್ರಹ್ಮಾನ್, ಮುಹಮ್ಮದ್ ಹಸನ್ ಮುನ್ನ ಅಧ್ಯಕ್ಷರು ಹಿಮಾಯತುಲ್ ಇಸ್ಲಾಂ ಜುಮ್ಮಾ ಮಸೀದಿ ಪೊಲ್ಯ, ಇಸ್ಲಾಮಿಕ್ ಕಲ್ಚರ್ ನ ಇಬ್ರಾಹಿಂ, ಮಸ್ಜಿದೇ ಹನಫಿ ಅಧ್ಯಕ್ಷ ಇಬ್ರಾಹಿಂ ಮುಖ್ಯ ಅತಿಥಿಗಳಾಗಿದ್ದರು. ಖಲೀಲ್ ಉಚ್ಚಿಲ ಸ್ವಾಗತಿಸಿದರು. ನೂರ್ ನವಾಝ್ ವಂದಿಸಿದರು.
Kshetra Samachara
17/02/2021 09:38 am