ಉಡುಪಿ: ಉಡುಪಿ ಜಿಲ್ಲೆಯ ಮಿಯಾರು ದೊಡ್ಮನೆ ಕುಟುಂಬಸ್ಥರ ಮೂಲ ನಾಗಬನ ಮಿಯಾರು ದೊಡ್ಮನೆ ಯಲ್ಲಿ ಚತುಃ ಪವಿತ್ರ ನಾಗಮಂಡಲೋತ್ಸವ ಫೆ. 22ರಂದು ಚೇರ್ಕಾಡಿ ವೇದಮೂರ್ತಿ ಸುದರ್ಶನ ಸೂರ್ಯ ನಾಗಯಕ್ಷಿ ಪಾತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಮಿಯಾರು ದೊಡ್ಮನೆ ಕುಟುಂಬಸ್ಥರು ಹಿಂದಿನ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ನಾಗದೇವರ ಸನ್ನಿಧಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನಾಗಮಂಡಲ ಪ್ರಯುಕ್ತ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Kshetra Samachara
09/02/2021 12:56 pm