ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ಮಾರಿ ಜಾತ್ರೋತ್ಸವದಲ್ಲಿ 'ಭಕ್ತಿ ಲೋಕ' ಅನಾವರಣ

ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗಂಗೊಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ನಾನಾ ಕಡೆಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿವೆ.

ಈ ದೇವಿ ಜಾತ್ರೆಯ ಇತಿಹಾಸವೇ ಬಹು ಸುಂದರ. ಇಲ್ಲಿ ಪೂರ್ವಜರ ಕಾಲದಿಂದಲೂ ಜನರು ಆರಾಧಿಸಿಕೊಂಡು ಬರುತ್ತಿರುವ ಆರಾಧ್ಯ ದೇವರು ಶ್ರೀ ಮಹಾಂಕಾಳಿ ಅಮ್ಮ. ಈ ಗ್ರಾಮದ ಜನರ ಕಷ್ಟ-ದುರಿತಗಳನ್ನು ನಿವಾರಿಸಿ ಗ್ರಾಮದೇವತೆಯಾಗಿ ಇಲ್ಲಿ ನೆಲೆಸಿದ್ದಾರೆ.

ಮೀನುಗಾರಿಕೆ ಗಂಗೊಳ್ಳಿ ಗ್ರಾಮದ ಜನರ ಮೂಲ ಕಸುಬಾಗಿದ್ದು, ಮೀನುಗಾರರ ಪಾಲಿನ ದೇವತೆ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಕ್ಷೇತ್ರ ಇದಾಗಿದೆ. ಫೆ. 2ರಿಂದ 5ರ ತನಕ ಜಾತ್ರೆ ನಡೆಯಲಿದ್ದು, ಶ್ರೀ ಅಮ್ಮನವರಿಗೆ ವಿಶೇಷ ವಾರ್ಷಿಕ ರಂಗಪೂಜೆ ಸೇವೆ, ಗೆಂಡ ಸೇವೆ, ಢಕ್ಕೆಬಲಿ, ನರ್ತನ ಸೇವೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

Edited By : Manjunath H D
Kshetra Samachara

Kshetra Samachara

04/02/2021 01:39 pm

Cinque Terre

12.57 K

Cinque Terre

1

ಸಂಬಂಧಿತ ಸುದ್ದಿ